Select Your Language

Notifications

webdunia
webdunia
webdunia
webdunia

ನಾಗರಹೊಳೆಯಲ್ಲಿ ಬಿಳಿ ಜಿಂಕೆ ಪತ್ತೆ

A white deer was found in Nagarhole
ನಾಗರಹೊಳೆ , ಭಾನುವಾರ, 11 ಜೂನ್ 2023 (18:48 IST)
ಕಪ್ಪು ಚಿರತೆ ಆಯ್ತು ಈಗ ಬಿಳಿ ಬಣ್ಣದ ಜಿಂಕೆಯ ಸರದಿ ನಾಗರಹೊಳೆ ಅಭಯಾರಣ್ಯದಲ್ಲಿ ಬಿಳಿ ಜಿಂಕೆ ಕಾಣಿಸಿಕೊಂಡಿದೆ. ಮೈಸೂರಿನ ಹೆಚ್‌.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ವಲಯದ ತಾರಕ ಜಲಾಶಯದ ಹಿನ್ನೀರು ಪ್ರದೇಶದ ಜಿಂಕೆ ಗುಂಪಿನಲ್ಲಿ ಬಿಳಿ ಬಣ್ಣದ ಜಿಂಕೆ ಕಾಣಿಸಿಕೊಂಡಿದೆ. ಸಫಾರಿಗೆ ಹೋದ ಪ್ರವಾಸಿಗರಿಗೆ ಬಿಳಿ ಬಣ್ಣದ ಜಿಂಕೆ ಕಂಡು ಫುಲ್ ಖುಷ್ ಆಗಿದ್ದರು. ಜೀವ ವೈವಿಧ್ಯತೆಯ ಬಹುದೊಡ್ಡ ತಾಣವೇ ಆಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಳಿ ಬಣ್ಣದ ಚುಕ್ಕಿ ಜಿಂಕೆ ಕಾಣಿಸಿದ್ದು, ವನ್ಯಜೀವಿ ಆಸಕ್ತರಲ್ಲಿ ಕುತೂಹಲ ಹೆಚ್ಚಿಸಿದೆ. ವನ್ಯಪ್ರಾಣಿಗಳ ವರ್ಣದ್ರವ್ಯದಲ್ಲಿನ ವ್ಯತ್ಯಾಸದಿಂದ ಪ್ರಾಣಿಗಳ ಬಣ್ಣದಲ್ಲಿ ಬದಲಾವಣೆಯಾಗಿರುವ ಸಾಧ್ಯತೆಯಿದೆ. ಮೆಲನಿನ್‌ ದೇಹದಲ್ಲಿ ಹೆಚ್ಚಾದರೆ ಬಿಳಿ ಬಣ್ಣ, ಮೆಲನಿನ್‌ ಕಡಿಮೆಯಾದರೆ ಕಪ್ಪು ಬಣ್ಣದಲ್ಲಿ ಪ್ರಾಣಿಗಳು ಜನನವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ