Publish Date: Sat, 10 Sep 2022 (18:58 IST)
Updated Date: Sat, 10 Sep 2022 (19:04 IST)
ನೀರಿನ ರಭಸಕ್ಕೆ ಹಳ್ಳದಲ್ಲಿ ಯುವತಿ ಕೊಚ್ಚಿಕೊಂಡು ಹೋಗಿರುವಂತಹ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡಮುಗುಳಿ ಗ್ರಾಮದಲ್ಲಿ ನಡೆದಿದೆ. ದಾನೇಶ್ವರಿ (18) ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿರೋ ಯುವತಿ. ಯುವತಿ ಶವ ಸಿಗದೇ ಕುಟುಂಬದವರು ಕಂಗಾಲಾಗಿದ್ದಾರೆ. ನಿನ್ನೆ ಮಧ್ಯಾಹ್ನ ಹಳ್ಳದಲ್ಲಿ ಯುವತಿ ಕೊಚ್ಚಿಕೊಂಡು ಹೋಗಿದ್ದು, ನಿನ್ನೆಯಿಂದ ದಾನೇಶ್ವರಿ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ತಾಯಿ ಜೊತೆ ಬಟ್ಟೆ ತೊಳೆಯಲು ಹಳ್ಳಕ್ಕೆ ಹೋಗಿದ್ದ ದಾನೇಶ್ವರಿ ಕಾಲಿ ಜಾರಿ ಬಿದ್ದು ನೀರು ಪಾಲಾಗಿದ್ರು, ಕೊಚ್ಚಿ ಹೋದ ಯುವತಿ ಅಗ್ನಿಶಾಮಕ ಸಿಬ್ಬಂದಿ, SDRF ತಂಡದಿಂದ ಶೋಧ ನಡೆಸಲಾಗುತ್ತಿದೆ. ನರೋಣಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.