ಬೆಂಗಳೂರು: ಸಿಎಂ ಸಿದ್ದರಾಮಯ್ಯ ನವರೇ ವಕ್ಫ್ ಮಂಡಳಿ ಹೆಸರಿನಲ್ಲಿ ನಡೆಯುತ್ತಿರುವ ದಬ್ಬಾಳಿಕೆಗೆ ಶೀಘ್ರವೇ ಅಂತ್ಯ ಹಾಡದಿದ್ದರೆ, ಜನ ನಿಮ್ಮ ಸರ್ಕಾರದ ವಿರುದ್ಧ ದಂಗೆ ಏಳುವ ದಿನ ದೂರವಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಇದೀಗ ವಕ್ಫ್ ಆಸ್ತಿ ವಿವಾದ ಭಾರೀ ಸದ್ದು ಮಾಡುತ್ತಿದ್ದು, ಇದೀಗ ವಕ್ಫ್ ಭೂತ ನಗರದ ಐತಿಹಾಸಿಕ ಲಾಲ್‌ಬಾಗ್ ಉದ್ಯಾನವನದ ಮೇಲೂ ಬಿದ್ದಿದೆ.
ಈ ಬಗ್ಗೆ ಆಕ್ರೋಶ ಹೊರಹಾಕಿ ವಿಪಕ್ಷ ನಾಯಕ ಆರ್ ಅಶೋಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.
ನಾಡಪ್ರಭು ಕೆಂಪೇಗೌಡರು ಕಟ್ಟಿದ ಚಿಕ್ಕಪೇಟೆ ಬಳೇ ಪೇಟೆ, ಕಾಟನ್ ಪೇಟೆ ಅವರದ್ದು ಅಂದಿದ್ದಾಯ್ತು, ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್ ಅವರದ್ದು ಅಂದಿದ್ದಾಯ್ತು, ಈಗ ಲಾಲ್ ಬಾಗ್ ಉದ್ಯಾನವನವೂ ಅವರದ್ದೇ ಅಂತೆ.
ಸಿಎಂ ಸಿದ್ದರಾಮಯ್ಯನವರೇ ವಕ್ಫ್ ಮಂಡಳಿ ಹೆಸರಿನಲ್ಲಿ ನಡೆಯುತ್ತಿರುವ ಈ ದಬ್ಬಾಳಿಕೆಗೆ ಶೀಘ್ರವೇ ಅಂತ್ಯ ಹಾಡದಿದ್ದರೆ, ಜನ ನಿಮ್ಮ ಸರ್ಕಾರದ ವಿರುದ್ಧ ದಂಗೆ ಏಳುವ ದಿನ ದೂರವಿಲ್ಲ. ಇನ್ನಾದರೂ ಈ ಓಲೈಕೆ ರಾಜಕಾರಣ ಬಿಡಿ. ನಿಮ್ಮನ್ನ ನಂಬಿ ಮತ ನೀಡಿರುವ ನಾಡಿನ ಜನಸಾಮಾನ್ಯರ ಆಸ್ತಿ-ಪಾಸ್ತಿ ಉಳಿಸುವ ಮೂಲಕ ಅವರ ಋಣ ತೀರಿಸಿ.