Select Your Language

Notifications

webdunia
webdunia
webdunia
webdunia

ಮೊಬೈಲ್​ ಟವರ್​ಗಳಲ್ಲಿ ಇರುವ ಚಿಪ್​ ಕದಿಯುತ್ತಿದ್ದ ಕಳ್ಳ

ಮೊಬೈಲ್​ ಟವರ್​ಗಳಲ್ಲಿ ಇರುವ ಚಿಪ್​ ಕದಿಯುತ್ತಿದ್ದ ಕಳ್ಳ
bangalore , ಸೋಮವಾರ, 4 ಅಕ್ಟೋಬರ್ 2021 (21:07 IST)
ಬೆಂಗಳೂರು: ಮೊಬೈಲ್​ ಟವರ್​ಗಳಲ್ಲಿ ಇರುವ ಚಿಪ್​ ಕದಿಯುತ್ತಿದ್ದ ಕಳ್ಳನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 25 ಲಕ್ಷ ರೂ. ಮೌಲ್ಯದ 19 ಮೊಬೈಲ್ ಟವರ್ ಚಿಪ್ ವಶಕ್ಕೆ ಪಡೆಯಲಾಗಿದೆ.
ಗಂಗಾಧರ್​ ಬಂಧಿತ ಆರೋಪಿ.
ಖಾಸಗಿ ಮೊಬೈಲ್ ಕಂಪೆನಿಯಲ್ಲಿ ಸೈಟ್ ಇಂಜಿನಿಯರ್ ಆಗಿದ್ದ ಗಂಗಾಧರ್ ಕದ್ದ ಚಿಪ್​ಗಳನ್ನು ಅಕ್ರಮವಾಗು ಮಾರುತ್ತಿದ್ದ ಎಂದು ತಿಳಿದುಬಂದಿದೆ.
ಗಂಗಾಧರ್ ಮೊಬೈಲ್ ಟವರ್​ಗಳಿಗೆ ಹೋಗಿ ಬೆಲೆಬಾಳುವ ಚಿಪ್ ಗಳನ್ನ ಕಳ್ಳತನ ಮಾಡುತಿದ್ದ. ಈ ಬಗ್ಗೆ ಮೊಬೈಲ್ ಕಂಪೆನಿಯವರು ಪೀಣ್ಯ ಠಾಣೆಗೆ ದೂರನ್ನು ನೀಡಿದ್ದರು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಟೆಲಿಕಾಂ ಕಂಪನಿಯ ಟವರ್​ಗಳ ಮ್ಯಾನೇಜ್ ಕೆಲಸ ನಿರ್ವಹಿಸುವ ಕಂಪನಿಯಲ್ಲಿ ಕೆಲಸಕ್ಕಿದ್ದ ಗಂಗಾಧರ್ ಟವರ್​ಗಳ ಸಂಪೂರ್ಣ ಮಾಹಿತಿ ಹೊಂದಿದ್ದ. ಕೆಲಸ ಕಳೆದುಕೊಂಡ ಬಳಿಕ ಹಣವಿಲ್ಲದೇ ಪರದಾಟ ಪಟ್ಟಿದ್ದ. ಬಳಿಕ ಈ ಕೃತ್ಯಕ್ಕೆ ಕೈ ಹಾಕಿದ್ದ ಎಂದು ಮಾಹಿತಿ ಲಭ್ಯವಾಗಿದೆ. ಪೀಣ್ಯ, ಕೊಣನಕುಂಟೆ, ಪುಲಕೇಶಿನಗರ ಸೇರಿದಂತೆ ಕನಕಪುರದಲ್ಲೂ ಚಿಪ್ ಕಳ್ಳತನ ಮಾಡಿದ್ದ ಎನ್ನಲಾಗಿದೆ. ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ ಒಟ್ಟು 9 ಪ್ರಕರಣ ಪತ್ತೆಯಾಗಿದೆ. ಪೀಣ್ಯ ಪೊಲೀಸರು ಆರೋಪಿಯ ವಿಚಾರಣೆ ಮುಂದುವರೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮಂಗಳವಾರದಿಂದ ಎರಡು ದಿನ ಶಾಹೀನ್ ಚಂಡಮಾರುತ ಪ್ರಭಾವ