Publish Date: Thu, 05 Dec 2019 (08:20 IST)
Updated Date: Thu, 05 Dec 2019 (08:22 IST)
ಲಕ್ನೋ : ಸಿಆರ್ ಪಿಎಫ್ ಯೋಧ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯ ಮಗ ಸೇರಿ ನಾಲ್ವರು ಪೊಲೀಸ್ ಲೋಗೋ ಇರುವ ಕಾರಲ್ಲೇ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದ ಮಿರ್ಜಾಪರದ ಹಳಿಯಾ ಎಂಬಲ್ಲಿ ನಡೆದಿದೆ.
ಜೈಲರ್ ಮಗ ಜೈಪ್ರಕಾಶ್, ಸಿಆರ್ ಪಿಎಫ್ ಯೋಧ ಮಹೇಂದ್ರ ಕುಮಾರ್ ಯಾದವ್, ಲವ್ ಕುಮಾರ್ ಪಾಲ್, ಗಣೇಶ್ ಪ್ರಸಾದ್ ಈ ಕೃತ್ಯ ಎಸಗಿದ ಆರೋಪಿಗಳಾಗಿದ್ದು, ವಿದ್ಯಾರ್ಥಿನಿಗೆ ಮೊದಲೇ ಪರಿಚಯದವನಾಗಿದ್ದ ಜೈಪ್ರಕಾಶ್ ಆಕೆಯನ್ನು ಊರಿನ ಹೊರವಲಯಕ್ಕೆ ಬರಲು ಹೇಳಿ ತನ್ನ ಸ್ನೇಹಿತರ ಜೊತೆ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹಳಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.