Select Your Language

Notifications

webdunia
webdunia
webdunia
webdunia

ಎರಡುವರೆ ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳ ದಾಳಿ

street dog
bangalore , ಶನಿವಾರ, 4 ಸೆಪ್ಟಂಬರ್ 2021 (20:41 IST)
ಮನೆ ಮುಂದೆ ಆಟವಾಡುತ್ತಿದ್ದ ಎರಡುವರೆ ವರ್ಷದ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ತೀವ್ರ ಗಾಯಗೊಳಿಸಿರುವ ಘಟನೆ ಎಚ್‍ಎಎಲ್‍ನ ನಾರಾಯಣರೆಡ್ಡಿ ಲೇಔಟ್‍ನಲ್ಲಿ ನಡೆದಿದೆ. 
ಉತ್ತರಭಾರತ ಮೂಲದ ಎಚ್‍ಎಎಲ್‍ನ ನಾರಾಯಣರೆಡ್ಡಿ ಲೇಔಟ್‍ನ ಚಿನ್ನಪ್ಪನ ಹಳ್ಳಿಯ ನಿವಾಸಿ ಸುರೇಶ್ ದಂಪತಿ ಮಗಳು ಪೂನಮ್ (2.5) ಗಾಯಗೊಂಡ ಮಗು. 
ಸುರೇಶ್ ಮನೆ ಸಮೀಪದ ಬಿಲ್ಡಿಂಗ್‍ವೊಂದರಲ್ಲಿ ಸೆಕ್ಯೂರಿಟಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಕುಟುಂಬಸ್ಥರ ಜತೆ ವಾಸಿಸುತ್ತಿದ್ದರು. ಆ.28ರಂದು ಬೆಳಗ್ಗೆ 8 ಗಂಟೆಗೆ ಪೂನಮ್ ಮನೆ ಮುಂದೆ ಆಟವಾಡುತ್ತಿದ್ದಾಗ ಮೂರು ಬೀದಿ ನಾಯಿಗಳು ಬಂದು ಏಕಾಏಕಿ ಮಗುವಿನ ಮೇಲೆ  ದಾಳಿ ನಡೆಸಿವೆ. ಮಗುವಿನ ಕುತ್ತಿಗೆ, ತೊಡೆ, ಕಿವಿ ಭಾಗಕ್ಕೆ ಕಚ್ಚಿವೆ. ಗಾಯಗೊಂಡಿರುವ ಮಗು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. 
ಬೀದಿ ನಾಯಿಗಳ ಹಾವಳಿ ತಡೆಯುವಂತೆ ಈ ಹಿಂದೆ ಹಲವು ಬಾರಿ ಬಿಬಿಎಂಪಿಗೆ ದೂರು ನೀಡಿದ್ದರೂ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಮಗುವಿನ ಪಾಲಕರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಚ್‍ಎಎಲ್ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿz್ದÁರೆ. ಪ್ರಕರಣ ದಾಖಲಿಸಿಕೊಂಡಿರುವ ಎಚ್‍ಎಎಲ್ ಪೆÇಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಡಿಮೆ ಬೆಲೆಗೆ ಹೆರಾಯಿನ್ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ