ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ
bangalore , ಗುರುವಾರ, 28 ಜುಲೈ 2022 (19:42 IST)
ಬೆಂಗಳೂರು ಅದ್ರಿತ್ ಫೌಂಡೇಶನ್ ವತಿಯಿಂದ , ಕಣ್ಣು, ರಕ್ತ ಮತ್ತು ಅಂಗಾಂಗ ದಾನದ ಕುರಿತು ಅರಿವು ಮೂಡಿಸುವ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು... ರಾಜರಾಜೇಶ್ವರಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾದ ಶ್ರೀ. ಎಂ ಕೆ. ಕೃಷ್ಣ. ಅದ್ರಿತ್ ಫೌಂಡೇಶನ್‌ನ ಸಂಸ್ಥಾಪಕಿ ಶ್ರೀಮತಿ ಶರ್ಮಿಳಾ ಶೇಷಾದ್ರಿ ಮತ್ತು ಸಹ ನಿರ್ದೇಶಕರಾದ ಶ್ರೀ ಗಣೇಶ್ ಕುಮಾರ್ ಮತ್ತು ಶ್ರೀಮತಿ ಪದ್ಮಜಾ ರಾವ್, ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹಲವರು ಭಾಗವಹಿಸಿ ತಮ್ಮ ಅಂಗಗಳನ್ನು ದಾನ ಮಾಡುವ ಉದಾತ್ತ ಪ್ರತಿಜ್ಞೆಯನ್ನು ಸ್ವೀಕರಿಸಿದ್ದು ಗಮನ ಸೆಳೆಯಿತು.. ಇನ್ನೂ ಮುಂದಿನ ದಿನಗಳಲ್ಲಿ ಅದ್ರಿತ್ ಸಂಸ್ಥೆ ವತಿಯಿಂದ ಅಂಗಾಂಗ ದಾನದ ಕುರಿತು ಅರಿವು ಹಾಗೂ ದೃಷ್ಟಿ ಹೀನ ಮಕ್ಕಳು ಹಾಗೂ ವಯಸ್ಕರಿಗೆ ಟ್ರೈನಿಂಗ್ ಕೌನ್ಸಲಿಂಗ್ ನೀಡುವ ಕಾರ್ಯಕ್ರಮಗಳಿಗೆ ಇಂದು ಚಾಲನೆ ಸಹ ನೀಡಲಾಯಿತು.
ಮುಂದಿನ ಸುದ್ದಿ