Webdunia - Bharat's app for daily news and videos

Install App

ತಿಮ್ಮರಾಯಸ್ವಾಮಿಗೆ ವಿಶೇಷ ಪುಷ್ಪಯಾಗ; ಭಕ್ತಿಸಾಗರದಲ್ಲಿ ತೇಲಿದ ಜನ…

Webdunia
ಗುರುವಾರ, 2 ಆಗಸ್ಟ್ 2018 (20:43 IST)
ಆಷಾಢ ಮಾಸ ಹಿನ್ನೆಲೆಯಲ್ಲಿ ಆನೇಕಲ್‍ನ ಐತಿಹಾಸಿಕ ಶ್ರೀ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪುಷ್ಪ ಯಾಗವನ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಲಾಯಿತು.

10 ಕ್ಕೂ ಹೆಚ್ಚು ವಿವಿಧ ರೀತಿಯ ಸುಮಾರು 150 ಕೆಜಿ ಪುಷ್ಪಗಳನ್ನ ಬಳಸಿ ಈ ಪುಷ್ಪಯಾಗವನ್ನ ನಡೆಸಲಾಯಿತು. ಸಾಮಾನ್ಯವಾಗಿ ಭಕ್ತರು ಯಜ್ಞಗಳ ಮೂಲಕ ದೇವತೆಗಳನ್ನು ತೃಪ್ತಿಪಡಿಸುತ್ತಾರೆ. ಆದರೆ ವಿಶೇಷವಾಗಿ ಪ್ರಕೃತಿಯಲ್ಲಿ ದೊರೆಯುವ ವಿಧ ವಿಧದ ಪುಷ್ಪಗಳ ಮೂಲಕ ದೇವತೆಗಳ ಅನುಗ್ರಹವನ್ನ ಅಲ್ಲಿ ಪಡೆದುಕೊಳ್ಳಲಾಯಿತು.

ವೇದೊಕ್ತ ಮಂತ್ರ ಪುಷ್ಪಗಳಿಂದ ಪುರೋಹಿತರು, ಶ್ರೀ ತಿಮ್ಮರಾಯಸ್ವಾಮಿ ಉತ್ಸವ ಮೂರ್ತಿಗೆ ಹೂಗಳನ್ನ ಸಮರ್ಪಣೆ ಮಾಡಿದರು. ಆನೇಕಲ್‍ನ ಹಲವು ಭಕ್ತರು ಯಾಗ ಮಾಡಲು ಪುಷ್ಪಗಳನ್ನ ದೇವಾಲಯಕ್ಕೆ ನೀಡಿದ್ದರು. ಸುಮಾರು 2 ಗಂಟೆಗಳ ಕಾಲ ವೇದ ಮಂತ್ರ ಘೋಷಣೆಯೊಂದಿಗೆ ಅಪರೂಪದ ಪುಷ್ಪ ಯಾಗವನ್ನ ನಡೆಸಲಾಯಿತು. ತಿಮ್ಮರಾಯಸ್ವಾಮಿ ದೇವಾಲಯದ ಈ ಅಪರೂಪದ ವಿದ್ಯಮಾನವನ್ನ ಸಾವಿರಾರು ಜನ ಕಣ್ಣು ತುಂಬಿಕೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments