ದೊಡ್ಡಬಳ್ಳಾಪುರ: ಅಮ್ಮ ಮತ್ತು ಮಗನ ನಡುವೆ ಶುರುವಾದ ಜಗಳ ತಾಯಿಯ ಹತ್ಯೆಯಲ್ಲಿ ಅಂತ್ಯವಾಗಿರುವ ಬೆಚ್ಚಿಬೀಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊಲೆಯಾದ ತಾಯಿಯನ್ನು ರತ್ನಮ್ಮ(56) ಎಂದು ಗುರುತಿಸಲಾಗಿದೆ. ಮಗ ಗಂಗರಾಜು ಕೊಲೆ ಆರೋಪಿ ಆಗಿದ್ದಾನೆ. ಮಗನೇ ತಾಯಿಯ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ಹೊರವಲಯದ ರಾಗರಾಳ್ಳಗುಟ್ಟೆ ಬಳಿ ನಡೆದಿದೆ.
ಗಲಾಟೆ ವಿಕೋಪಕ್ಕೆ ತಿರುಗಿ ಗಂಗರಾಜು ತಾಯಿಯನ್ನು ಕೊಂದಿದ್ದಾನೆ. ಕೊಲೆ ನಂತರ ಸ್ಥಳದಿಂದ ಪರಾರುಯಾಗಿದ್ದಾನೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಹೊರವಲಯದ ರಾಗರಾಳ್ಳಗುಟ್ಟೆಯಲ್ಲಿ ಪ್ರಕರಣ ದಾಖಲಾಗಿದೆ.<>