Webdunia - Bharat's app for daily news and videos

Install App

ಬಿಜೆಪಿ ಕಚೇರಿ ಸ್ಫೋಟಕ್ಕೆ ಸಂಚು, ಚಾರ್ಜ್‌ಶೀಟ್‌ನಲ್ಲಿ ಬೆಚ್ಚಿಬೀಳಿಸಿದ ರಾಮೇಶ್ವರ್ ಕೆಫೆ ಸ್ಪೋಟದ ಆರೋಪಿಗಳ ಪ್ಲ್ಯಾನ್

Sampriya
ಸೋಮವಾರ, 9 ಸೆಪ್ಟಂಬರ್ 2024 (19:24 IST)
Photo Courtesy X
ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳಾದ ಮುಸ್ಸಾವಿರ್ ಹುಸೇನ್ ಶಾಜಿಬ್, ಅಬ್ದುಲ್ ಮಥೀನ್ ಅಹ್ಮದ್ ತಾಹಾ, ಮಾಜ್ ಮುನೀರ್ ಅಹ್ಮದ್ ಮತ್ತು ಮುಝಮ್ಮಿಲ್ ಶರೀಫ್ ವಿರುದ್ಧ ಎನ್‌ಐಎ ಸೋಮವಾರ ಚಾರ್ಜ್ ಶೀಟ್ ಸಲ್ಲಿಸಿದೆ.

ಮಾರ್ಚ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಜನರು ಗಾಯಗೊಂಡಿದ್ದರು ಮತ್ತು ಹೋಟೆಲ್ ವ್ಯಾಪಕ ಹಾನಿಯಾಗಿತ್ತು. ಈ ಸಂಬಂಧ ತನಿಖೆ ಆರಂಭಿಸಿದ ಎನ್‌ಐಎ, ವಿವಿಧ ರಾಜ್ಯಗಳ ಪೊಲೀಸ್ ಪಡೆಗಳು ಮತ್ತು ಇತರ ಏಜೆನ್ಸಿಗಳ ಸಹಕಾರದೊಂದಿಗೆ ನಾಲ್ವರನ್ನು ಬಂಧಿಸಿತ್ತು.

ಇಂದು ಆರೋಪಿಗಳ ವಿರುದ್ಧದ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಅದರಲ್ಲಿ 2024ರ ಜ.22ರಂದು ಅಯೋಧ್ಯೆಯಲ್ಲಿ ನಡೆದಿದ್ದ ಪ್ರಾಣಪ್ರತಿಷ್ಠಾಪನೆ ಸಮಾರಂಭ ದಿನದಂದು ಕರ್ನಾಟಕದ ಬಿಜೆಪಿ ಕಚೇರಿ ಸ್ಫೋಟಗೊಳಿಸುವ ಪ್ಲ್ಯಾನ್​ ವಿಫಲವಾದ ಹಿನ್ನೆಲೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಫೋಟಿಸಲು ಪ್ಲ್ಯಾನ್​ ಮಾಡಿದ್ದರು. ಅದರಂತೆ ಆರೋಪಿಗಳು ರಾಮೇಶ್ವರಂ ಕೆಫೆಯಲ್ಲಿ ಬಾಂಬ್​ ಸ್ಫೋಟಿಸಿದ್ದಾರೆ ಎಂದು ಎನ್​ಐಎ ವಿಶೇಷ ಕೋರ್ಟ್​ಗೆ ಸಲ್ಲಿಸಿರುವ ಚಾರ್ಜ್​​ಶೀಟ್​​​ನಲ್ಲಿ ಉಲ್ಲೇಖಿಸಲಾಗಿದೆ.

ಡಾರ್ಕ್ ವೆಬ್‌ನಿಂದ ಡೌನ್‌ಲೋಡ್ ಮಾಡಲಾದ ಭಾರತದ ಮತ್ತು ಬಾಂಗ್ಲಾದೇಶದ ವಿವಿಧ ಗುರುತಿನ ದಾಖಲೆಗಳ ಜೊತೆಗೆ ಮೋಸದಿಂದ ಪಡೆದ ಭಾರತೀಯ ಸಿಮ್ ಕಾರ್ಡ್‌ಗಳು ಮತ್ತು ಭಾರತೀಯ ಬ್ಯಾಂಕ್ ಖಾತೆಗಳನ್ನು ತಾಹಾ ಮತ್ತು ಶಾಜಿಬ್ ಬಳಸಿದ್ದಾರೆ ಎಂದು ಎನ್ಐಎ ತಿಳಿಸಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಜಯೇಂದ್ರನಿಂದ ನಾನು ಪಾಠ ಕಲಿಯಬೇಕಾ: ಸಿದ್ದರಾಮಯ್ಯ ರೋಷಾವೇಷ

ಅಮಾನತು ಮಾಡೋದು, ಮತ್ತೆ ರದ್ದು ಮಾಡೋದು ಎಲ್ಲಾ ನಾಟಕ: ಬಿವೈ ವಿಜಯೇಂದ್ರ

ಕೇರಳ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಸಂಪೂರ್ಣವಾಗಿ ರದ್ದು

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Video: ಆಪರೇಷನ್ ಸಿಂಧೂರ್ ಶೌರ್ಯದ ಬಗ್ಗೆ ಹೇಳಿದ್ರೆ ವಿಪಕ್ಷಗಳು ಮೇಜು ತಟ್ಟಲ್ಲ ಯಾಕೆ: ಅನುರಾಗ್ ಠಾಕೂರ್

ಮುಂದಿನ ಸುದ್ದಿ
Show comments