Publish Date: Thu, 08 Jan 2026 (16:50 IST)
Updated Date: Thu, 08 Jan 2026 (16:53 IST)
ಚಿತ್ರದುರ್ಗಾ: ತಂದೆ ಸರಿಯಾದ ಸಮಯಕ್ಕೆ ಮದುವೆ ಮಾಡಿಲ್ಲವೆಂದು ಆಕ್ರೋಶಗೊಂಡ ಪಾಪಿ ಪುತ್ರನೋರ್ವ ತಂದೆಯನ್ನೇ ಕೊಂದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಅತಿಘಟ್ಟ ಗ್ರಾಮದಲ್ಲಿ ನಡೆದಿದೆ.
ಮಗನಿಂದ ಕೊಲೆಯಾದ ತಂದೆಯನ್ನು ಗ್ರಾಮದ ಸಣ್ಣನಿಂಗಪ್ಪ ಎಂದು ಗುರುತಿಸಲಾಗಿದೆ. ಈತನ ಪುತ್ರ ನಿಂಗರಾಜ್ ತನ್ನೊಟ್ಟಿಗೆ ಬೆಳೆದ ಸ್ನೇಹಿತರೆಲ್ಲರೂ ಮದುವೆಯಾಗಿದೆ. ಆದರೆ ತನಗೆ ಮದುವೆಯಾಗಿಲ್ಲವೆಂದು ಆಗಾಗ ತಂದೆಯ ಜಗಳ ಮಾಡುತ್ತಿದ್ದ. ಈ ವಿಚಾರವಾಗಿ ಅಣ್ಣ, ಅಕ್ಕ, ತಾಯಿ, ಕುಟುಂಬಸ್ಥರು ಎಷ್ಟೇ ಬುದ್ಧಿವಾದ ಹೇಳಿದರೂ ಜಗಳ ಮಾತ್ರ ನಿಲ್ಲಿಸಿರಲಿಲ್ಲ. ಇದೇ ವಿಚಾರಕ್ಕೆ ಸಿಟ್ಟಾಗಿದ್ದ ನಿಂಗರಾಜ್ (36) ಬುಧವಾರ ರಾತ್ರಿ ತಂದೆ ಸಣ್ಣನಿಂಗಪ್ಪ (65) ಮಲಗಿದ್ದ ವೇಳೆ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಬುಧವಾರ ನಿಂಗರಾಜ್ ಮದುವೆ ಮಾಡದ ವಿಚಾರಕ್ಕೆ ತಂದೆ ಸಣ್ಣನಿಂಗಪ್ಪ ಜೊತೆಗೆ ಜಗಳ ಮಾಡಿದ್ದ. ಆಗ ಹೊಸದುರ್ಗದಲ್ಲಿ ಇದ್ದ ಹಿರಿಯ ಮಗ ಮಾರುತಿ ಮನೆಗೆ ಕರೆಸಿಕೊಂಡು ಬುದ್ಧಿವಾದವನ್ನು ಹೇಳಿದ್ದಾನೆ. ಆದರೆ ಇಷ್ಟಕ್ಕೆ ಸುಮ್ಮನೆ ಆಗದ ನಿಂಗರಾಜ್ 11 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದ್ದಂತಹ ತಂದೆ ಸಣ್ಣನಿಂಗಪ್ಪನಿಗೆ ಟ್ರ‍್ಯಾಕ್ಟರ್‌ನಲ್ಲಿದ್ದ ರಾಡ್‌ನಿಂದ ತಲೆಗೆ ಹೊಡೆದು ಪರಾರಿ ಆಗಿದ್ದಾನೆ.