Select Your Language

Notifications

webdunia
webdunia
webdunia
webdunia

ಓಲಾ-ಉಬರ್ ಸಂಸ್ಥೆಯ ವಿರುದ್ಧ ಸರಣಿ ದೂರು

ಓಲಾ-ಉಬರ್ ಸಂಸ್ಥೆಯ ವಿರುದ್ಧ ಸರಣಿ ದೂರು
bangalore , ಭಾನುವಾರ, 22 ಮೇ 2022 (20:12 IST)
ರಾಜಧಾನಿ ಸಿಲಿಕಾನ್ ಸಿಟಿ ಮಂದಿ ಪ್ರತಿಯೊಂದಕ್ಕೂ ಕುಳಿತಿರುವ ಜಾಗದಲ್ಲಿಯೇ ಓಲಾ-ಉಬರ್ ಕ್ಯಾಬ್ ಬುಕ್ ಮಾಡ್ತಾರೆ. ಆದ್ರೆ ಈಗ ಆ್ಯಪ್ ಆಧಾರಿತ ಸಾರಿಗೆ ಸೇವೆ ಒದಗಿಸುತ್ತಿರುವ ಆಗ್ರೀಗೇಟರ್ ಕಂಪನಿಗಳಾದ ಓಲಾ-ಉಬರ್ ಸಂಸ್ಥೆಯ ಮೇಲೆ ಸರಣಿ ಸರಣಿ  ದೂರುಗಳು ದಾಖಲಾಗಿದೆ. ಅನಧಿಕೃತ ದೂರು, ಹೆಚ್ಚು ಶುಲ್ಕ ವಸೂಲಿ ಮಾಡ್ತಿರುವ ಓಲಾ-ಉಬರ್ ಸಂಸ್ಥೆಗೆ ಸಿಸಿಪಿಎ ನೋಟಿಸ್ ಜಾರಿಗೊಳಿಸಿದೆ.ಓಲಾ -ಉಬರ್ ಸಂಸ್ಥೆಯ ಮೇಲೆ ನಿತ್ಯ ನೂರಾರು ದೂರುಗಳು ದಾಖಲಾಗ್ತಿದೆ. ಸುಮಾರು 13 ತಿಂಗಳಿಗೆ ಓಲಾ- ಉಬರ್ ಸಂಸ್ಥೆಯ ವಿರುದ್ಧ 3,000 ಸಾವಿರ ಕ್ಕೂ ದೂರುಗಳು ದಾಖಲಾಗಿದೆ. ಜನರು ಹತ್ತಿರದ ಸ್ಥಳಗಳಿಗೆ ಹೋಗಲು ಕ್ಯಾಬ್ ಬುಕ್ ಮಾಡ್ತಾರೆ. ಕ್ಯಾಬ್ ಗೆ ಡಿಮ್ಯಾಂಡ್ ಶುರುವಾಗಿದೆ. ಆದ್ರೆ ಈಗ ಕ್ಯಾಬ್ ವಿರುದ್ಧ ಮತ್ತು ಕ್ಯಾಬ್ ಚಾಲಕರ ವಿರುದ್ಧ ಗ್ರಾಹಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಆ್ಯಪ್ ಆಧಾರಿತ ಕ್ಯಾಬ್ ಗಳಿಂದ ಕಿರಿ ಕಿರಿಯಾಗ್ತಿದೆ ಅಂತಾ ಜನರು ದೂರುತ್ತಿದ್ದಾರೆ. ಮೊದಲಿನಂತೆ ಈಗ ಓಲಾ- ಉಬರ್ ನಿಂದ ಉತ್ತಮ ಸೇವೆ ಜನರಿಗೆ ಸಿಗ್ತಿಲ್ಲ. ಒಂದು ಕಡೆ ಕ್ಯಾಬ್ ಗಳ ಸಂಖ್ಯೆ ಕಡಿಮೆಯಾಗಿದೆ. ಮತ್ತೊಂದು ಕಡೆ ಕಡಿಮೆ ಚಾಲಕರಿಂದ ಓಲಾ- ಉಬರ್ ಹೆಚ್ಚಿನ ಕೆಲಸ ಮಾಡಿಸಿಕೊಳ್ತಿದ್ದಾರೆ. ಇನ್ನು ಕ್ಯಾಬ್ ಬಳಸುವ ಗ್ರಾಹಕರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಹಾಗೆ ದೂರುಗಳು ಕೂಡ ಹೆಚ್ಚಾಗಿ ದಾಖಲಾಗ್ತಿದೆ.

ಓಲಾ-ಉಬರ್ ನಲ್ಲಿರುವ  ಸಮಸ್ಯೆಗಳು ಇಂತಿವೆ  
 
- ಅಸಮರ್ಪಕವಾದ ಸೇವೆ
-ಹಣಮರುಪಾವತಿ ವಿಳಂಬ
- ಅನಧಿಕೃತ ಶುಲ್ಕ
- ಹೆಚ್ಚುವರಿ ಶುಲ್ಕ ವಸೂಲಿ
- ಕ್ಯಾಬ್ ನಲ್ಲಿ  ಕಿರಿಕಿರಿ 

 ಈ ಹಿಂದೆ  ನಗರದಲ್ಲಿರುವ ಓಲಾ- ಉಬರ್ ಕ್ಯಾಬ್ ಗಳನ್ನ ಬುಕ್ ಮಾಡಿದ್ರೆ ತಕ್ಷಣ ಬರ್ತಿತ್ತು. ಆದ್ರೆ ಈಗ ಆಗಲ್ಲ ಕ್ಯಾಬ್ ಬುಕ್ ಮಾಡಿದ್ರೆ ಅದು ಸರಿಯಾದ ಸಮಯಕ್ಕೆ ಬರಲ್ಲ. ಜೊತೆಗೆ ಕ್ಯಾನ್ಸಲ್ ಕೂಡ ಆಗುತ್ತೆ. ಇಷ್ಟೆಲ್ಲ ಸಮಸ್ಯೆಗಳ ಮದ್ಯೆ ಜನರು ಅಡ್ಜೇಸ್ಟ್ ಮಾಡಿಕೊಂಡು ಹೋದ್ರು ಕ್ಯಾಬ್ ನಲ್ಲಿ ಎಸಿ ಹಾಕಲ್ಲ. ಮೂರು ಜನರಿಗಿಂತ ಹೆಚ್ಚು ಜನರನ್ನ ಕೂರಿಸಲ್ಲ. ಆ್ಯಪ್ ನಲ್ಲಿರುವ ದರಕ್ಕಿಂತ ದುಪ್ಪಟ್ಟು ಹಣವನ್ನ ವಸೂಲಿ ಮಾಡ್ತಾರೆ. ಹೀಗೆ ನಾನಾ ರೀತಿಯ ಸಮಸ್ಯೆಗಳು ಓಲಾ- ಉಬರ್ ನಲ್ಲಿದೆ. ಈಗ ಜನರು ಕೂಡ ಈ ಖಾಸಗಿ ವಾಹನಗಳ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಅಷ್ಟೇ ಅಲ್ಲ ನಿತ್ಯವು ಕೂಡ ಓಲಾ- ಉಬರ್ ವಿರುದ್ಧ ಆರೋಪ ಹೊರಸುತ್ತಿದ್ದಾರೆ. 

ಇನ್ನು ಇಷ್ಟೆಲ್ಲ ಆರೋಪ ಎದುರಿಸುತ್ತಿರುವ ಓಲಾ-ಉಬರ್ ಸಂಸ್ಥೆಗೆ ಕಡಿವಾಣವೇ ಇಲ್ಲದಂತಾಗಿದೆ. ಈ ಸಂಸ್ಥೆ ಹಣ ಸಂಪಾದನೆ ಮಾಡುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದೆ. ಆದ್ರೆ ಗ್ರಾಹಕರ ಸಮಸ್ಯೆಗೆ ಮಾತ್ರ ಪರಿಹಾರ ಸಿಕ್ತಿಲ್ಲ. ಹೀಗಾಗಿ ನಾಗರಿಕರಿಗೆ ಮತ್ತು ಚಾಲಕರಿಗೆ ಅನುಕೂಲವಾಗುವ ರೀತಿಯಲ್ಲಿ ಆ್ಯಪ್ ಬಿಡುಗಡೆ ಮಾಡಬೇಕು. ಗ್ರಾಹಕರಿಗಾಗಿ ಹೆಲ್ಪ್ ಲೈನ್ ನಂಬರ್ ತೆರೆಯಬೇಕು . ಆಗ ಈ ರೀತಿ ದೂರುಗಳು, ಸಮಸ್ಯೆಗಳ ಸಂಖ್ಯೆ ಕಡಿಮೆಯಗುತ್ತೆ. ಆದ್ರೆ ಸರ್ಕಾರ , ಸಾರಿಗೆ ಇಲಾಖೆ ಮಾತ್ರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ತಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಶಾಂತ್ ನೀಲ್- ಜ್ಯೂ.ಎನ್ ಟಿಆರ್ ಚಿತ್ರದ ವಿಲನ್ ಪಾತ್ರದಲ್ಲಿ ಕಮಲ್ ಹಾಸನ್ ಎಂಟ್ರಿ?