ಉತ್ತರ ಕರ್ನಾಟಕದ ಪ್ರತ್ಯೇಕ ಕೂಗೂ ಅಸಂಬದ್ಧ. ಈ ಭಾಗದ ಸಚಿವರು, ಶಾಸಕರು, ಸಂಸದರು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಮೊದಲು ಚರ್ಚೆಮಾಡಬೇಕಿದೆ. ಈ ಭಾಗ ಅಭಿವೃದ್ಧಿಯಾಗಬೇಕಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. 
									
			
			 
 			
 
 			
					
			        							
								
																	ಶಾಲಾ ಶಿಕ್ಷಕರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ,  ಮೊದಲು ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು ಸೇರಿ  ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಜೊತೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ. 
									
										
								
																	ಬಸ್ ಪಾಸ್ ವಿಚಾರವಾಗಿ ಮಾತನಾಡಿದ ಹೊರಟ್ಟಿಯವರು, ಕನ್ನಡ ಮೀಡಿಯಂ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡುವುದೇ ಸೂಕ್ತ. ಅಲ್ಲಿ ಬಡವರ ಮಕ್ಕಳು ಮಾತ್ರ ಓದುತ್ತಾರೆ. ಅವರಿಗೆ ಬಸ್ ಪಾಸ್ ಅವಶ್ಯವಿದೆ ಎಂದರು. ಇನ್ನು ಕೆ.ಬಿ. ಕೋಳಿವಾಡರವರು ಮನೆಗೆ ಪೀಠೋಪಕರಣ ಒಯ್ದಿದ್ದು ತಪ್ಪು ಎಂದು ಅಭಿಪ್ರಾಯಪಟ್ಟರು.