Webdunia - Bharat's app for daily news and videos

Install App

ಪೀಸ್ ಕಟ್ಟದ ಮಕ್ಕಳನ್ನು ಶಾಲಾಕೊಠಡಿಯಿಂದ ಹೊರಕ್ಕೆ ಹಾಕಿದ ಶಾಲಾ ಆಡಳಿತ ಮಂಡಳಿ

Webdunia
ಗುರುವಾರ, 23 ಸೆಪ್ಟಂಬರ್ 2021 (21:40 IST)
ಕರೋನಾ  ಹಿನ್ನಲೆ 20-21ರ ಸಾಲಿನ ವರ್ಷದ .. ಮಕ್ಕಳ ಶಾಲಾ ಶುಲ್ಕ  ಕಟ್ಟಿದ 60 ಮಕ್ಕಳನ್ನು ಕಾಂಪೌಂಡ್ ಒಳಗಡೆಯ ನೆಲದಲ್ಲಿ ಕೂರಿಸಿ ಕಿರುಕುಳ.. ಈ ರೀತಿ ವಿನೂತನ ತಾರತಮ್ಯ ಮಾಡಲು ಹೊರಟಿದೆ ದೊಡ್ಡಬಳ್ಳಾಪುರದ ಶಾಲೆ.. ಶುಲ್ಕ  ವಸೂಲಿಗೆ ಇಳಿದ ದೊಡ್ಡಬಳ್ಳಾಪುರದ ಜ್ಞಾನಗಂಗಾ ವಿದ್ಯಾಸಂಸ್ಥೆ   ವಿದ್ಯಾರ್ಥಿಗಳನ್ನ ತರಗತಿಯಿಂದ ಹೊರಗೆ ಕೂರಿಸಿ ಪೋಷಕರ ಮೇಲೆ ಒತ್ತಡ ತಂತ್ರ ಹಾಕುತ್ತಿದೆ..
ಕರೋನಾ ನಡುವೆ ಸರಕಾರ ಶಾಲೆಗಳನ್ನು ಆರಂಭಿಸಿದೆ.. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ  ಇಲ್ಲೊಂದು ಖಾಸಗಿ ಶಾಲಾ ಆಡಳಿ ಮಂಡಳಿ ಬಾಕಿ ಉಳಿದ ಫೀಸ್  ಕಟ್ಟಿಲ್ಲ ಎಂದು ಮಕ್ಕಳನ್ನು ತರಗತಿಯಿಂದ  ಹೊರಗೆ ಕೂರಿಸಿದೆ.. ಈ ಮೂಲಕ ಪೋಷಕರಿಂದ ಶುಲ್ಕ  ವಸೂಲಿಯ ಯತ್ನಕ್ಕೆ ಮುಂದಾಗಿದೆ..
ದೊಡ್ಡಬಳ್ಳಾಪುರ ಜ್ಞಾನಗಂಗಾ ವಿದ್ಯಾಸಂಸ್ಥೆ ಶಾಲಾ  ಶುಲ್ಕ ವಸೂಲಿಗೆ ಅವಿವೇಕತನದ ದಾರಿ ಹಿಡಿದಿದೆ..ಕಳೆದ ವರ್ಷದಿಂದ ಪೋಷಕರು ಶಾಲೆಗಳತ್ತ ಮುಖ ಮಾಡಿಲ್ಲ..ಎಷ್ಟು ಬಾರಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಹೀಗಾಗಿ ಮಕ್ಕಳನ್ನು ತರಗತಿಯಿಂದ  ಹೊರಗೆ ಕೂರಿಸಲಾಗಿದೆ.. ಸರಕಾರದ ನಿಯಮದಂತೆ ಶೇ 70 ರಷ್ಟು ಮಾತ್ರ ಶುಲ್ಕ ವಸೂಲಿ ಮಾಡಲಾಗುತ್ತಿದೆ..  ಕೆಲ ಪೋಷಕರಿಂದ‌ ಎಷ್ಟು ಹಣ ಕಟ್ಟಲು ಸಾಧ್ಯವೋ ಅಷ್ಟು ಮಾತ್ರ ಕಟ್ಟಿಸಿಕೊಳ್ಳಲು ಹೇಳಲಾಗಿದೆ.. ಶಾಲೆಯ ಬಳಿಗೆ ಬರದೆ ಮೊಂಡು ಬಿದ್ದಿರುವ ಪೋಷಕರಿಗೆ‌ ಮನವರಿಕೆ ಮಾಡಲು ಈ ರೀತಿಯ ಕ್ರಮ ತೆಗೆದುಕೊಳ್ಳಲಾಗ್ತಿದೆ..   ಷೋಷಕರೂ ಸಹ‌ ಆಡಳಿತ ಮಂಡಳಿಯ ಕಷ್ಟ ಅರಿತುಕೊಳ್ಳಬೇಕಿದೆ.. ನಮಗೂ ಶಾಲೆ ನಡೆಸಲು ಕಷ್ಟವಾಗ್ತಿದೆ ಎಂದು ವಿದ್ಯಾರ್ಥಿಗಳನ್ನ ಹೊರಗೆ ಕೂರಿಸಿದ ಬಗ್ಗೆ  ಆಡಳಿತ  ಮಂಡಳಿ  ಸಮರ್ಥಿಸಿಕೊಂಡಿದೆ..
ಜ್ಞಾನಗಂಗಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಮೇಲೆ ನಡೆಸಿದ ಕ್ರಮದ ಬಗ್ಗೆ  ಪ್ರತಿಕ್ರಿಯೆ  ನೀಡಿದ ಬಿಇಓ 
ಸರ್ಕಾರದ ಮಾರ್ಗಸೂಚಿಯಂತೆ ಯಾರೂ ಕೂಡ ಮಕ್ಕಳನ್ನು ತರಗತಿಯಿಂದ ಹೊರಗೆ ಕೂರಿಸಬಾರದು..ಶಾಲಾ ಶುಲ್ಕ ಕಟ್ಟುವ ವಿಷಯ ಪೋಷಕರು ಮತ್ತು ಆಡಳಿತ ಮಂಡಳಿಗೆ ಸೇರಿದ್ದು.. ಸರ್ಕಾರ ಎಷ್ಟು ಶುಲ್ಕ ನಿಗದಿ ಮಾಡಿದೆಯೋ ಅಷ್ಟು ಮಾತ್ರ ಶುಲ್ಕ ವಸೂಲಿ ಮಾಡಬೇಕು.. ಸರಕಾರ ಮಕ್ಕಳನ್ನು ಶಿಕ್ಷಣದಿಂದ ಹೊರಗೆ ಉಳಿಸಬಾರದು ಎಂದು ಕಟ್ಟು ನಿಟ್ಟಿನ ಸುತ್ತೋಲೆ ಹೊರಡಿಸಲಾಗಿದೆ.. ಮತ್ತೆ ಈ ರೀತಿಯ ಘಟನೆ ಮರುಕಳಿಸದಂತೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು BEO ಶುಭಮಂಗಳ ತಿಳಿಸಿದರು

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments