Webdunia - Bharat's app for daily news and videos

Install App

ರುಂಡ ಕತ್ತರಿಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್

Webdunia
ಸೋಮವಾರ, 1 ಅಕ್ಟೋಬರ್ 2018 (16:34 IST)
ಮಂಡ್ಯದಲ್ಲಿ ಸೆ. 29 ರಂದು ಯುವಕನೊಬ್ಬ ಸ್ನೇಹಿತನನ್ನು ಭೀಕರವಾಗಿ ಕೊಲೆ ಮಾಡಿ ರುಂಡದೊಂದಿಗೆ ಪೊಲೀಸ್ ಠಾಣೆಗೆ ತಂದು ಶರಣಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ದೊರಕಿದೆ.

ಚಿಕ್ಕಬಾಗಿಲು ಗ್ರಾಮಸ್ಥರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಕೊಲೆಗೈದಿರುವ ಪಶುಪತಿ ಹೇಗಾದರೂ ಮಾಡಿ ಹೆಸರು ಮಾಡಬೇಕೆಂಬ ಹುಚ್ಚುತನದಿಂದ ತನ್ನ ತಾಯಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ಕೊಲೆ ಮಾಡಿರುವುದಾಗಿ ಸುಳ್ಳು ಹೇಳಿಕೆ ನೀಡಿದ್ದಾನೆ ಎಂದಿದ್ದಾರೆ.

ಸೆ.29ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದ ಹೊರವಲಯದಲ್ಲಿ ಪಶುಪತಿ ಎಂಬಾತ ಸ್ನೇಹಿತ ಗಿರೀಶ್ ಎಂಬುವನನ್ನು ಕೊಲೆಗೈದಿದ್ದ. ನಂತರ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗೆ ರುಂಡದೊಂದಿಗೆ ಬಂದು ಶರಣಾಗಿದ್ದ. ಈ ವೇಳೆ ಗಿರೀಶ ತನ್ನ ತಾಯಿಗೆ ಕೆಟ್ಟದಾಗಿ ಸನ್ನೆ ಮಾಡಿದ್ದರಿಂದ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದ. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಾಗಿಲು ಗ್ರಾಮದ ಮುಖಂಡರು  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಲೆಯಾಗಿರುವ ಗಿರೀಶ್ ತುಂಬಾ ಒಳ್ಳೆಯ ಹುಡುಗ. ಯಾವ ಹೆಣ್ಣಿನೊಂದಿಗೂ ಆತ ಕೆಟ್ಟದಾಗಿ ನಡೆದುಕೊಂಡಿಲ್ಲ. ಜೊತೆಗೆ ಆಧಾರ ಸ್ಥಂಭವಾಗಿದ್ದ ಒಬ್ಬನೇ ಮಗನನ್ನ ಕಳೆದುಕೊಂಡು ಗಿರೀಶನ ಕುಟುಂಬ ಬೀದಿಗೆ ಬಿದ್ದಿದೆ.

ಕೊಲೆ ಆರೋಪಿ ಪಶುಪತಿ ಹೇಗಾದರೂ ಮಾಡಿ ರಾಜ್ಯದಲ್ಲೇ ಹೆಸರು ಮಾಡಬೇಕೆಂಬ ದುರುದ್ದೇಶದಿಂದ ತಾಯಿಯನ್ನ ಕೆಟ್ಟದಾಗಿ ಸನ್ನೆ ಮಾಡಿದ್ದಕ್ಕೆ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಈ ಹಿಂದೆ ತನ್ನ ಸ್ನೇಹಿತರೊಂದಿಗೆ ಪಶುಪತಿ ಹೇಗಾದರೂ ಮಾಡಿ ಹೆಸರು ಮಾಡುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ. ಮುಂಗೋಪಿಯಾಗಿದ್ದ ಆತ ಕೆಲವರೊಂದಿಗೆ ಜಗಳ ತೆಗೆದು ತಲೆ ಕತ್ತರಿಸುತ್ತೇನೆ ಎಂದು ಹೇಳಿದ್ದ. ಆತನ ಹೇಳಿಕೆಯಿಂದ ಗ್ರಾಮಕ್ಕೆ ಕೆಟ್ಟ ಹೆಸರು ಬಂದಿದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video,ಪಾಕ್‌ನ ಗ್ಯಾಂಗ್‌ಸ್ಟರ್‌ ಉಜೈರ್‌ ಬಲೋಚ್‌ ಸಹೋದರನಿಗೆ ಗುಂಡೇಟು, ಸ್ಥಿತಿ ಗಂಭೀರ

ಗಾಯಗೊಂಡ ದೆಹಲಿ ಪೊಲೀಸರ ಕುಟುಂಬಸ್ಥರು ಅಳುತ್ತಿದ್ದಾರೆ ಎಂದಿದ್ದಕ್ಕೆ ನೀವು ಬಿಜೆಪಿಯವರಾ ಎಂದ ರಾಹುಲ್ ಗಾಂಧಿ Video

ರಾಜ್ಯದ ಹಿತಕ್ಕಾಗಿ ನಾವಿದ್ದೇವೆ, ದಯವಿಟ್ಟು ಬಂದ್ ಕೈಬಿಡಿ: ಡಿಕೆ ಶಿವಕುಮಾರ್‌

ಮಂಡ್ಯದಲ್ಲಿ ಬಿಜೆಪಿ ನಾಯಕರ ಕಾವೇರಿ ಹೋರಾಟದ ಕಿಚ್ಚು: ಯಾರು ಏನೆಲ್ಲಾ ಹೇಳಿದ್ರು ನೋಡಿ

ದೃಶ್ಯಂ ಸಿನಿಮಾವನ್ನು ಮೀರಿಸುವ ಗುಜರಾತ್‌ನಲ್ಲಿ ನಡೆದ ಈ ಪ್ರಕರಣ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments