Webdunia - Bharat's app for daily news and videos

Install App

ಅರ್ಧ ಎಕರೆಯಲ್ಲಿ 2. 5ಲಕ್ಷ ಸಂಪಾದಿಸುವ ಮಾದರಿ ರೈತ

Webdunia
ಶನಿವಾರ, 16 ಡಿಸೆಂಬರ್ 2023 (14:16 IST)
ಸಂಜೆಯ ಹೊತ್ತಿನಲ್ಲಿ ಸುವಾಸನೆಯ ಸುಗಂಧ ಬೀರುತ್ತ, ಮುಖ್ಯವಾಗಿ ಹೂಮಾಲೆಗಳಿಗೆ ಅತ್ಯಾವಶ್ಯಕವಾಗಿ ಬೇಕಾಗಿರುವ ಹೂವು ಸುಗಮಧರಾಜ. ಈ ಹೂವಿಗೆ ಎಲ್ಲೆಡೆ ವ್ಯಾಪಕ ಬೇಡಿಕೆ ಇದೆ. ಸುಗಂಧರಾಜ ಹೂವಿನ ಬೆಳೆ ಸಾಮಾನ್ಯವಾಗಿ ಚಿತ್ರದುರ್ಗ, ದಾವಣಗೆರೆ, ತುಮಕೂರು ಹೀಗೆ ದಕ್ಷಿಣಕರ್ನಾಟಕದ ಜಿಲ್ಲೆಗಳಲ್ಲಿ ಬೆಳೆಯುವುದು ಹೆಚ್ಚು. ಆದರೆ, ರೈತ ದಾವಲ್‍ಸಾಬ್, ಕೊಪ್ಪಳ ಜಿಲ್ಲೆಯಂತಹ ಬಿಸಿಲಿನ ನಾಡಿನಲ್ಲಿಯೂ ಈ ಹೂವನ್ನು ಬೆಳೆದು, ಯಶಸ್ವಿಯಾಗಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.
 
ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯ ಈ ವರ್ಷ ಬರದ ಬೇಗುದಿಗೆ ಸಿಲುಕಿದೆ. ಒಂದೆಡೆ ಈರುಳ್ಳಿ ಬೆಳೆದ ರೈತರು ದರ ಕುಸಿತದ ಬಿರುಗಾಳಿಗೆ ಸಿಕ್ಕಿ ನಷ್ಟ ಅನುಭವಿಸುತ್ತಿದ್ದಾರೆ. ಉಳಿದ ಕೃಷಿ ಬೆಳೆಗಳು ಮಳೆಯ ಕೊರತೆಯಿಂದ ಕೈಗೆ ಬಂದಿಲ್ಲ. ಇವೆಲ್ಲ ಸಂಕಷ್ಟಗಳ ನಡುವೆಯೂ ಸ್ವಲ್ಪ ಜಮೀನಿನಲ್ಲಿಯೇ ಸುಗಂಧರಾಜ ಪುಷ್ಪ ಕೃಷಿಯನ್ನು ಕೈಗೊಂಡು ನಿತ್ಯ ಲಾಭಗಳಿಸುತ್ತ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ ಕೊಪ್ಪಳ ತಾಲೂಕಿನ ಬೇಳೂರು ಗ್ರಾಮದ ರೈತ ದಾವಲಸಾಬ್.
 
ತೋಟಗಾರಿಕೆ ಇಲಾಖೆಯ ವತಿಯಿಂದ ನೆರವು ಹಾಗೂ ತಂತ್ರಜ್ಞಾನ ಪಡೆದು, ಪುಷ್ಪಕೃಷಿಯನ್ನು ಯಶಸ್ವಿಯಾಗಿ ಕೈಗೊಂಡು ಉತ್ತಮ ಲಾಭ ಪಡೆಯುತ್ತಿರುವ ರೈತನ ಯಶೋಗಾಥೆಯ ವರದಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಕೊಪ್ಪಳ ತಾಲೂಕು ಬೇಳೂರು ಗ್ರಾಮಕ್ಕೆ ವಿಶೇಷ ಮಾಧ್ಯಮ ಅಧ್ಯಯನ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
 
ಕಳೆದ ವರ್ಷ ಕೇವಲ ಅರ್ಧ ಎಕರೆಯಲ್ಲಿ ಶೃಂಗಾರ ತಳಿಯ ಸುಗಂಧರಾಜ ಬೆಳೆಯ ಗೆಡ್ಡೆಯನ್ನು ಭೂಮಿಗೆ ಬಿತ್ತಿದ ದಾವಲಸಾಬ, ಸತತ ಎಂಟು ತಿಂಗಳ ಕಾಲ ತಾಳ್ಮೆಯಿಂದ ಕಾಯ್ದು, ಇದೀಗ ನಿತ್ಯ ಉತ್ತಮ ಲಾಭ ಗಳಿಸುತ್ತಿದ್ದಾರೆ. ಇದೀಗ ನಿತ್ಯ ಕನಿಷ್ಟ 15 ರಿಂದ 20 ಕೆ.ಜಿ. ಹೂ ಪಡೆಯುತ್ತಿದ್ದು, ಕೊಪ್ಪಳದ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಹೂವಿಗೆ 50 ರಿಂದ 60 ರೂ. ದರ ಸಿಗುತ್ತಿದ್ದು, ನಿತ್ಯ ಕನಿಷ್ಟ ಎಂಟು ನೂರು ಗಳಿಂದ ಒಂದು ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ. ಶ್ರಾವಣ ಮಾಸದಲ್ಲಿ, ಹಬ್ಬ ಹರಿದಿನಗಳಲ್ಲಿ, ಅಮವಾಸ್ಯೆ, ಹುಣ್ಣಿಮೆಯ ಹಿಂದಿನ ದಿನದಲ್ಲಿ ಪ್ರತಿ ಕೆ.ಜಿ. ಗೆ ಗರಿಷ್ಠ 150 ರೂ. ವರೆಗೂ ಲಭ್ಯವಾಗುತ್ತದೆ.

ಖರ್ಚು ವೆಚ್ಚ ಹೊರತುಪಡಿಸಿ ಅರ್ಧ ಎಕರೆಯಲ್ಲಿ, ವರ್ಷಕ್ಕೆ ಕನಿಷ್ಟ 2 ರಿಂದ 2.5 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಸುಗುಂಧರಾಜ ಹೂವಿನ ವಿಶೇಷತೆ ಎಂದರೆ, ಹೂವನ್ನು ಬಿಡಿಸಿದ ನಂತರವೂ, ಕನಿಷ್ಟ 03 ದಿನಗಳ ಕಾಲ ಬಾಡದೆ ಸುಗಂಧವನ್ನು ಸೂಸುತ್ತ ನಳನಳಿಸುತ್ತಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೆಪ್ಟೆಂಬರ್‌ನಿಂದ ತಮಿಳುನಾಡು ದೇವಾಲಯಗಳಲ್ಲಿ ರೀಲ್ ಭಕ್ತಿಗೆ ಅವಕಾಶವಿಲ್ಲ

ನಮ್ಮನ್ನು ನೇಣಿಗೆ ಹಾಕಿದ್ರೂ ಸರಿಯೇ, ವಂದೇ ಮಾತರಂ ಎರಡೇ ಪ್ಯಾರಾ ಹಾಡೋದು: ಬಿಕೆ ಹರಿಪ್ರಸಾದ್, Video

ಸೋನಿಯಾ ಗಾಂಧಿಯನ್ನು ಟೀಕಿಸ್ತೀರಾ, ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಟೀಕಿಸ್ತೀರಾ: ಖರ್ಗೆ ಪ್ರಶ್ನೆ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ತಮಿಳುನಾಡಿನ ಜೊಸೆಫ್ ವಿಜಯ್ ಕೇವಲ ಕ್ರಿಶ್ಚಿಯನ್ನರಿಗೆ ಮಾತ್ರ ಸಿಎಂ ಆಗಿದ್ದಾರಾ: ವಿಜಯೇಂದ್ರ

ಮುಂದಿನ ಸುದ್ದಿ
Show comments