ನಾಲ್ಕು ಹುಲಿ ಮರಿಗಳು ತನ್ನ ಅಮ್ಮನ ಪಕ್ಕದಲ್ಲಿ ಖುಷಿಯಿಂದ ಆಟ ಆಡುವ ಈ ದೃಶ್ಯವನ್ನು ನೋಡುವಾಗ ಮಂದಹಾಸ ಮೂಡುತ್ತದೆ. ಅರಣ್ಯಾಧಿಕಾರಿ ಸಂಜೀವ್ ಕುಮಾರ್ ಚಡ್ಡಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆಯಾದ ದೃಶ್ಯ ಇದು. ಈ ಕ್ಲಿಪ್‌ನಲ್ಲಿ ನಾಲ್ಕು ಪುಟಾಣಿ ಹುಲಿಗಳು ಅಮ್ಮನ ಪಕ್ಕದಲ್ಲಿ ಆಟ ಆಡುವ ದೃಶ್ಯವನ್ನು ನೋಡಬಹುದಾಗಿದೆ. ಅಮ್ಮ ಇಲ್ಲಿ ಹಾಯಾಗಿ ಮಲಗಿದ್ದರೆ, ಪುಟಾಣಿಗಳು ಅವಳ ಮೇಲೆ ಅತ್ತಿಂದಿತ್ತ ಓಡಾಡಿ, ಅವಳ ಪಕ್ಕದಲ್ಲಿ ಆಟ ಆಡಿ ಆನಂದಿಸುತ್ತಿದ್ದವು. ತನ್ನ ಕಂದಮ್ಮಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತಿದ್ದ ಅಮ್ಮ ಕೂಡಾ ಸುತ್ತಲೂ ದೃಷ್ಟಿ ಹಾಯಿಸಿ ನಿಗಾ ಇಡುತ್ತಿರುವುದನ್ನೂ ಇಲ್ಲಿ ಗಮನಿಸಬಹುದಾಗಿದೆ. ಸಹಜವಾಗಿಯೇ ಈ ಸುಂದರ ದೃಶ್ಯ ಎಲ್ಲರ ಹೃದಯ ಗೆದ್ದಿದೆ.