Select Your Language

Notifications

webdunia
webdunia
webdunia
webdunia

ಒಂದು ತಿಂಗಳಿನಿಂದ ತೇಕಲಹಳ್ಳಿ ಗ್ರಾಮದ ಜನರ ನಿದ್ದೆ ಕೆಡಿಸಿದ ಚಿರತೆ ಸೆರೆ

ಒಂದು ತಿಂಗಳಿನಿಂದ ತೇಕಲಹಳ್ಳಿ ಗ್ರಾಮದ ಜನರ ನಿದ್ದೆ ಕೆಡಿಸಿದ ಚಿರತೆ ಸೆರೆ
ಚಿಕ್ಕಬಳ್ಳಾಪುರ , ಸೋಮವಾರ, 12 ಸೆಪ್ಟಂಬರ್ 2022 (20:08 IST)
ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ತೇಕಲಹಳ್ಳಿ ಗ್ರಾಮದಲ್ಲಿ ರೈತರು ಮತ್ತು ಜನಸಾಮಾನ್ಯರ ನೆಮ್ಮದಿಯನ್ನು  ಚಿರತೆ ಕೆಡಿಸಿದೆ. ಕೊನೆಗೂ ಚುರತೆ ಅರಣ್ಯ ಇಲಾಖೆಯ ಬೋನಿನಲ್ಲಿ ಸರಿಯಾಗಿದೆ.
ಮಂಚೇನಹಳ್ಳಿ ತಾಲೂಕು ಹಾಗೂ ಮತ್ತಿತರ ಪ್ರದೇಶದಲ್ಲಿ ಚಿರತೆಯ ಹಾವಳಿಯಿಂದ ಜನ ಆತಂಕಗೊಂಡಿದ್ದರು. ಈ ಸಂಬಂಧ ಕಳೆದ ಒಂದು ತಿಂಗಳ ಹಿಂದೆಯೇ ತೇಕಲಹಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
 
ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿ ಚೇತನ್ ಮತ್ತು ಅವರ ತಂಡ ರಾತ್ರಿ ಗಸ್ತು ಮಾಡಿದರಲ್ಲದೆ ಕಳೆದ ಒಂದು ತಿಂಗಳಿನಿಂದ ವಿವಿಧಡೆ ಬೋನಿಟ್ಟು ಚಿಂತೆಯನ್ನು ಸೆರೆಹಿಡಿಯುವ ಕೆಲಸವನ್ನು ಮಾಡಿದ್ದರು.
 
ಕೊನೆಗೂ ಸುಮಾರು ಎರಡು ವರ್ಷದ ಗಂಡು ಚಿರತೆ ಮರಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು ಇದರಿಂದ ಗ್ರಾಮಸ್ಥರು ನಿಟ್ಟ ಉಸಿರು ಬಿಟ್ಟಂತಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಗರದ ಹಲವೆಡೆ ಕೆರೆ ಒತ್ತುವರಿ ಕಾರ್ಯಶುರು