Select Your Language

Notifications

webdunia
webdunia
webdunia
webdunia

ಜಿಂಕೆ ಕಾಟಕ್ಕೆ ಸಾಕಿದ್ದ ನಾಯಿಯನ್ನೇ ಕೊಂದ ಚಿರತೆ

ಚಿರತೆ
ಹೊಸಕೋಟೆ : ಹುರುಳಿಕಾಯಿ ಮತ್ತು ಟೊಮೋಟೋ ಬೆಳೆಗಳನ್ನು ಜಿಂಕೆಗಳ ದಾಳಿಯಿಂದ ರಕ್ಷಿಸಲು ರೈತ ರಾಮಾಂಜಿ ತಮ್ಮ ಜಮೀನಿನಲ್ಲಿ ದುಬಾರಿ ಪಿಟ್‌ ಬುಲ್‌ ತಳಿಯ ನಾಯಿಯನ್ನು ಸಾಕಿದ್ದರು. ಆದರೆ ರಾತ್ರಿ ಪಕ್ಕದ ಅರಣ್ಯವಲಯದಿಂದ ಬಂದಿರುವ ಚಿರತೆ ನಾಯಿಯನ್ನೇ ಕೊಂದು ಹಾಕಿದೆ. ಜಿಂಕೆಗಳ ಕಾಟದಿಂದ ಮುಕ್ತಿ ಪಡೆಯಲು ಸಾಕಿದ್ದ ದುಬಾರಿ ಪಿಟ್‌ ಬುಲ್‌ ನಾಯಿಯನ್ನೇ ಚಿರತೆ ಕೊಂದು ಹಾಕಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಹಲಸಿನಕಾಯಿಪುರ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. 

ಇಷ್ಟೆಲ್ಲಾ ಅವಘಡಗಳು ನಡೆಯುತ್ತಿದ್ದರೂ ಸಹ ಅರಣ್ಯ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳುವುದಿರಲಿ ಕನಿಷ್ಠ ಸ್ಥಳಕ್ಕೆ ಬಂದು ಪರಿಶೀಲನೆಯನ್ನೂ ನಡೆಸಿಲ್ಲ ಎಂದು ರೈತ ರಾಮಾಂಜಿ ದುಃಖ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ಅಧಿವೇಶನದಲ್ಲಿ ಕೋಲಾಹಲ