ಸರ್ಕಾರದ ವಿರುದ್ಧ ವಿಪಕ್ಷಗಳು ಗುತ್ತಿಗೆದಾರರನ್ನ ಎತ್ತಿಕಟ್ಟಿದ್ದಾರೆಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಡಿಕೆಶಿ ಡಿಸಿಎಂ ಆದ ದಿನದಂದಲೂ ಸಿಎಂ ಅವರೋ, ಸಿದ್ದರಾಮಯ್ಯನವರೋ ಅನ್ನೋ ರೀತಿ ಮಾತನಾಡ್ತಿದ್ದಾರೆ. ಎಲ್ಲಾ ಇಲಾಖೆಗಳು ನಿಮ್ಮ ಕೈಯಲ್ಲೇ ಇವೆ ತನಿಖೆ ಮಾಡಿಸಿ. ಯಾವುದಾದರೊಂದು ಇಲಾಖೆಗೆ ಒಬ್ಬ ಜಡ್ಜ್ ಅವರನ್ನ ಚೇರ್ಮನ್ ಮಾಡಿ. 15 ದಿನ ಅವರಿಗೆ ಸಮಯ ಕೊಡಿ, ಒಂದು ಕೇಸ್ ಕೊಡಿ ನೋಡೋಣ. ಎಲ್ಲರದ್ದೂ ತನಿಖೆ ಮಾಡಿಸ್ತೀವಿ ಅಂತಾರೆ. ಬ್ಲ್ಯಾಕ್ಮೇಲ್ ತಂತ್ರದ ರಾಜಕಾರಣವನ್ನ ಬಿಜೆಪಿ ನಂಬಲ್ಲ. ಹಾಲಿ ಅಥವಾ ನಿವೃತ್ತ ಜಡ್ಜ್ ನೇತೃತ್ವದಲ್ಲಿ ಸಮಿತಿ ಆಗಿ, ತನಿಖೆಯಾಗಲಿ, ಗೊತ್ತಾಗುತ್ತೆ ಎಂದು ಸವಾಲ್ ಹಾಕಿದ್ದಾರೆ