Webdunia - Bharat's app for daily news and videos

Install App

ಊಟದಲ್ಲಿ‌ ಸೈನೆಡ್ ಬೇರೆಸಿ ಹೆಂಡತಿಯನ್ನೇ ಕೊಂದ ಗಂಡ

geetha
ಗುರುವಾರ, 7 ಮಾರ್ಚ್ 2024 (17:21 IST)
ಚಿಕ್ಕಮಗಳೂರು- ಚಿಕ್ಕಮಗಳೂತಿನಲ್ಲಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟ ಗೃಹಿಣಿಯ ಸಾವಿಗೆ ಬಿಗ್ ಟ್ವೀಸ್ಟ್ ಸಿಕ್ಕಿದೆ.ಪತಿ 
ದರ್ಶನ್ ಪತ್ನಿ ಶ್ವೇತಾಗೆ ರಾಗಿಮುದ್ದೆಯಲ್ಲಿ ಸೈನೈಡ್ ಹಾಕಿ ಹತ್ಯೆ ಗೈದಿದ್ದಾನೆ ಎಂದು ಪೋಲೀಸರ ತನಿಖೆ ವೇಳೆ ಬಯಲಾಗಿದೆ.
ಶ್ವೇತಾ ಹತ್ಯೆ ಮಾಡಿದ್ದು ನಾನೇ ಎಂದು ದರ್ಶನ್ ತಪೊಪ್ಪಿಕೊಂಡಿದ್ದು, ಅನೈತಿಕ ಸಂಬಂಧಕ್ಕೆ ಅಡ್ಡಲಾಗಿದ್ದ ಹೆಂಡತಿಯನ್ನ ಕೊಲೆ ಮಾಡಿದ್ದನೆ.

ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ದರ್ಶನ್ ಕಥೆ ಕಟ್ಟಿದ ಎನ್ನಲಾಗುತ್ತಿದೆ.ಪತ್ನಿ ಸಾವನ್ನಪ್ಪಿದ ಬಳಿಕ ಕೈಗೆ ಸೈನೆಡ್ ಇಂಜೆಕ್ಷನ್ ಕೂಡ ಕೊಟ್ಟಿದ್ದಾನೆ.ನಂತರ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ಬಿಂಬಿಸುವುದಕ್ಕೆ ಇತರ ಪ್ಲಾನ್ ಹಾಕಿದ್ದಾನೆ.
 
ಆದ್ರೆ ಆತನ್ನ ಪ್ಲಾನ್ ಉಲ್ಟಾ ಆಗಿದೆ.ಆತ ವಿಷದ ಇಂಜೆಕ್ಷನ್‌ ನೀಡಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಆದ್ರೆ, ಸೈನೇಡ್‌ ಮೂಲಕ ಸಾಯಿಸಲಾಗಿದೆ ಅನ್ನೋದು  ಸಾಬೀತಾಗಿದೆ. ಪತಿ ದರ್ಶನ್‌ ಇನ್ನೊಬ್ಬಳು ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ. ಇದು ಪತ್ನಿ ಶ್ವೇತಾಗೆ ತಿಳಿದು ಜಗಳ ಮಾಡಿದ್ದಳು. ಸಂಬಂಧಿಸಿದ ಯುವತಿಗೆ ಕರೆ ಮಾಡಿ ಪತಿಯ ತಂಟೆಗೆ ಬರಬೇಡ ಎಂದು ವಾರ್ನಿಂಗ್‌ ಕೂಡಾ ನೀಡಿದ್ದಳು.

ಇದಾದ ಮೇಲೆ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಬರುತ್ತಾಳೆ ಅಂತ ದರ್ಶನ್‌ ತನ್ನ ಪತ್ನಿಯನ್ನು ಕೊಲೆ ಮಾಡಿದ್ದ. ಅನಂತರ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಅಂತ ಕಥೆ ಕಟ್ಟಿದ್ದ.ಇದೀಗ ಮಾಡಲಾಗುತ್ತಿದೆ.ದರ್ಶನ್ ವಿರುದ್ಧ ಅನೈತಿಕ ಸಂಬಂಧ ಹೊಂದಿದ್ದ  ಆರೋಪ ಕೇಳಿ ಬಂದಿದೆ ಇದಕ್ಕೆ ಪತ್ನಿ ಅಡ್ಡಿಯಾಗಿದ್ದಕ್ಕೆ ದರ್ಶನ್ ಕೊಲೆ ಮಾಡಿದ್ದಾನೆ ಎಂದು ಮಹಿಳೆ ಕುಟುಂಬಸ್ಥರ ಆರೋಪಿಸುತ್ತಿದ್ದಾರೆ.ಇದೀಗ ಪೊಲೀಸರು ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಡಿಕೆ ಶಿವಕುಮಾರ್ ಮನಸ್ಸಿನ ಇಚ್ಛೇ ಆದಷ್ಟು ಭೇಗ ಫಲಿಸಲಿ: ಪುತ್ತಿಗೆ ಸ್ವಾಮೀಜಿ ಆಶೀರ್ವಾದ

90 ಪ್ರಯಾಣಿಕರಿದ್ದ ಏರ್‌ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಭೂಸ್ಪರ್ಶ

ನೈಸರ್ಗಿಕ ವಿಕೋಪಗಳು ದೇಶಕ್ಕೆ ಎದುರಾದ ಪರೀಕ್ಷೆ: 125ನೇ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ

ಅಪ್ರಾಪ್ತ ಬಾಲಕಿಯೊಂದಿಗೆ ಹಸೆಮಣೆಯೇರಿ ಕಳ್ಳಾಟವಾಡಿದ ಪಂಚಾಯಿತಿ ಅಧ್ಯಕ್ಷನಿಗೆ ಬಂಧನ ಭೀತಿ

ಇಂದಿನಿಂದಲೇ ಆಸ್ತಿ ನೋಂದಣಿ ಶುಲ್ಕ ಡಬಲ್‌: ಕಾಂಗ್ರೆಸ್‌ ಸರ್ಕಾರದ ನಡೆಗೆ ಎಲ್ಲೆಡೆ ಆಕ್ರೋಶ

ಮುಂದಿನ ಸುದ್ದಿ
Show comments