Select Your Language

Notifications

webdunia
webdunia
webdunia
webdunia

ಕೊರೊನಾಗೆ ಗುಡ್ ಬೈ ಹೇಳಿದ ಒಂದುವರೆ ವರ್ಷದ ಬಾಲಕಿ

ಕೊರೊನಾಗೆ ಗುಡ್ ಬೈ ಹೇಳಿದ ಒಂದುವರೆ ವರ್ಷದ ಬಾಲಕಿ
ವಿಜಯಪುರ , ಶುಕ್ರವಾರ, 1 ಮೇ 2020 (16:33 IST)
ಒಂದುವರೆ ವರ್ಷದ ಬಾಲಕಿ ಕೊರೊನಾ ವಿರುದ್ಧ ಹೋರಾಟ ನಡೆಸಿ ಜಯಸಾಧಿಸಿದ್ದಾಳೆ.

ಕೋವಿಡ್-19 ದಿಂದ ಗುಣಮುಖರಾದ ಐವರು ರೋಗಿಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.

ಒಂದುವರೆ ವರ್ಷದ ಹೆಣ್ಣುಮಗು ರೋಗಿ ಸಂಖ್ಯೆ 310, ವೃದ್ಧರಾದ 65 ವರ್ಷದ ರೋಗಿ ಸಂಖ್ಯೆ 306, 62ರ ವೃದ್ಧ ರೋಗಿ ಸಂಖ್ಯೆ 307, 60 ವರ್ಷದ ರೋಗಿ ಸಂಖ್ಯೆ 362 ಹಾಗೂ 36 ವರ್ಷದ  ರೋಗಿ ಸಂಖ್ಯೆ 308  ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 11 ಕೋವಿಡ್-19 ಪಾಸಿಟಿವ್ ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.

ಬಿಡುಗಡೆಗೊಂಡ ರೋಗಿಗಳಿಗೆ ಚಪ್ಪಾಳೆ ತಟ್ಟುವ ಮೂಲಕ, ಡೈಫ್ರೂಟ್ಸ್ ಒದಗಿಸುವ ಮೂಲಕ ಬಿಡುಗಡೆಗೊಳಿಸಲಾಯಿತು.



Share this Story:

Follow Webdunia kannada

ಮುಂದಿನ ಸುದ್ದಿ

1 ವರ್ಷದ ಮಗು ಕೊರೊನಾ ವಿರುದ್ಧ ಜಯಿಸಿದ್ದು ಹೇಗೆ?