Select Your Language

Notifications

webdunia
webdunia
webdunia
webdunia

ಕಾಲುವೆಗೆ ಉರುಳಿದ ಎತ್ತಿನ ಗಾಡಿ: ಐವರ ದುರ್ಮರಣ

ವಿಜಯಪುರ
ತೆರಳುತ್ತಿದ್ದ ಎತ್ತಿನ ಗಾಡಿಯೊಂದು ಕಾಲುವೆಗೆ ಉರುಳಿದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧಗಿ ತಾಲೂಕಿನ ಬಳಗಾನೂರಿನ ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆ ಬಳಿ ನಡೆದಿದೆ.  
 
ನೀರಿಗೆ ಬಿದ್ದ ಗಾಡಿಯು ಕಗ್ಗಳ್ಳಿಯಿಂದ ಮುಳಸಾವೆಳಗಿಗೆ ತೆರಳುತ್ತಿತ್ತು. ಇದರಲ್ಲಿ ಓರ್ವ ವೃದ್ಧೆ ಸೇರಿದಂತೆ ಏಳು ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆಯ ತಪ್ಪಿದ ಗಾಡಿ ಕಾಲುವೆಗೆ ಉರುಳಿ ಬಿದ್ದಿದ್ದು, ಈ ಪರಿಣಾಮ ಗಾಡಿಯಲ್ಲಿದ್ದ ಎಲ್ಲರೂ ಕೂಡ ನೀರಿಗೆ ಬಿದ್ದಿದ್ದಾರೆ. ಈ ದುರಂತದಲ್ಲಿ ಸುರೇಖಾ ಎಂಬ ಬಾಲಕಿ ಹಾಗೂ ಮಾಯವ್ವ ಎಂಬ ವೃದ್ಧೆ ಇಬ್ಬರೂ ಕೂಡ ಬದುಕುಳಿದಿದ್ದು, ಉಳಿದ ಐವರು ನೀರು ಪಾಲಾಗಿದ್ದರು. 
 
ನೀರು ಪಾಲಾಗಿ ಸಾವನ್ನಪ್ಪಿದವರನ್ನು ಆಕಾಶ್, ಕಾಶಿನಾಥ್ ಮತ್ತು ನಿಂಗಪ್ಪ ಎಂದು ಹೇಳಲಾಗಿದ್ದು, ಇವರ ಮೃತ ದೇಹಗಳನ್ನು ಈಗಾಗಲೇ ಶೋಧಿಸಲಾಗಿದೆ. ಇನ್ನುಳಿದ ಇಬ್ಬರಾದ ನೀಲಮ್ಮ ಹಾಗೂ ಚಿನ್ನಮ್ಮ ಅವರ ಮೃತ ದೇಹಗಳಿಗಾಗಿ ಹುಡುಕಾಟ ಶೋಧ ಕಾರ್ಯ ಆರಂಭಿಸಲಾಗಿದೆ. 
 
ಈ ಸಂಬಂಧ ಸಿಂದಗಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.  

Share this Story:

Follow Webdunia kannada