Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಯೂಥ್ ಅಧ್ಯಕ್ಷ ನಲಪಾಡ್ ಮೇಲೆ ಮತ್ತೆ ಧಮ್ಕಿ ಆರೋಪದ ದೂರು ದಾಖಲು

A complaint has been filed against Congress Youth President Nalapad alleging threats again
bangalore , ಶುಕ್ರವಾರ, 23 ಡಿಸೆಂಬರ್ 2022 (20:11 IST)
ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಕಾಂಗ್ರೆಸ್ ಯೂಥ್ ಅಧ್ಯಕ್ಷ ನಲಪಾಡ್ ಮತ್ತೆ ಧಮ್ಕಿ ಆರೋಪದ ದೂರು ದಾಖಲಾಗಿದೆ‌. ಪ್ರಚಾರಕ್ಕೆ ಅಂತ ಸ್ನೇಹಿತನ ಕಾರನ್ನ ಪಡೆದು ವಾಪಸ್ ಕೊಡದೆ ಬೆದರಿಕೆ ಆರೋಪದ ಹಿನ್ನೆಲೆ ಮೊಹಮ್ಮದ್ ನಲಪಾಡ್ ವಿರುದ್ದ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿದೆ.ಯೂತ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಸ್ನೇಹಿತನ ಫಾರ್ಚೂನರ್ ಕಾರನ್ನ ನಲಪಾಡ್ ಪಡೆದಿದ್ದು, ಕಾರು ಪಡೆದುಕೊಂಡು ಚುನಾವಣೆ ಬಳಿಕ ವಾಪಸ್ ಕೇಳಿದಾಗ ಬೆದರಿಕೆ ಹಾಕಿದ್ದಾರೆಂದು
ನಬ್ ಮೊಹಮ್ಮದ್ ನಜೀರ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ನಜೀರ್ ದೂರಿನ ಆಧಾರದ ಮೇಲೆ‌ ಎನ್ ಸಿಆರ್ ದಾಖಲಿಸಿಕೊಂಡ ಕಬ್ಬನ್ ಪಾರ್ಕ್ ಠಾಣೆ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಕ್ಕೆ ಫುಲ್ ಅಲರ್ಟ್ ಆದ ಪೊಲೀಸ್ ಇಲಾಖೆ