Publish Date: Sat, 16 Dec 2017 (08:28 IST)
Updated Date: Sat, 16 Dec 2017 (08:32 IST)
ಶಿವಮೊಗ್ಗ: ಕಾಲೇಜು ವಿದ್ಯಾರ್ಥಿಯ ಮೇಲೆ ಕೆಲ ಯುವಕರು ಚಾಕುವಿನಿಂದ ಇರಿದು ಹಲ್ಲೆಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಅಕ್ಷರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಬರಿ ಎಂಬಾತನು ಪಾರ್ಕ್ ನಲ್ಲಿ ಕುಳಿತಿದ್ದಾಗ ಕೆಲ ಯುವಕರು ಬಂದು ಈ ಕೃತ್ಯ ಎಸಗಿದ್ದಾರೆ. ನ್ಯಾಷನಲ್ ಕಾಲೇಜು ವಿದ್ಯಾರ್ಥಿಗಳ ನಡುವೆ ಜಗಳ ನಡೆದಿತ್ತು.ಜಗಳ ಮುಗಿದ ಮೇಲೆ ನ್ಯಾಷನಲ್ ಕಾಲೇಜು ವಿದ್ಯಾರ್ಥಿ ಜೊತೆ ಶಬರಿ ಗಾಂಧಿ ಪಾರ್ಕ್ ನಲ್ಲಿ ಕುಳಿತಿದ್ದಾಗ ಕೆಲ ಯುವಕರು ಬಂದು ಹಲ್ಲೆ ನಡೆಸಿ ನಂತರ ಚಾಕುವಿನಿಂದ ಇರಿದರು.
ಗಾಯಗೊಂಡ ವಿದ್ಯಾರ್ಥಿ ಖಾಸಗಿ ಆಸ್ಪತ್ರೆಗಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಈ ಪ್ರಕರಣ ಕೋಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ