Select Your Language

Notifications

webdunia
webdunia
webdunia
webdunia

ಕೆಎಸ್ಆರ್ಟಿಸಿಯಿಂದ ಪರಿಹಾರ ಕೋರಿ ಲಂಡನ್ ಕೋರ್ಟ್ನಲ್ಲಿ ದಾವೆ ಹೂಡಿದ್ದ ಬ್ರಿಟಿಷ್ ದಂಪತಿ

ಕೆಎಸ್ಆರ್ಟಿಸಿಯಿಂದ ಪರಿಹಾರ ಕೋರಿ ಲಂಡನ್ ಕೋರ್ಟ್ನಲ್ಲಿ ದಾವೆ ಹೂಡಿದ್ದ ಬ್ರಿಟಿಷ್ ದಂಪತಿ
ಬೆಂಗಳೂರು , ಮಂಗಳವಾರ, 25 ಜುಲೈ 2023 (09:22 IST)
ಬೆಂಗಳೂರು : ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾದ ಘಟನೆಯ ಪರಿಹಾರ ಕೋರಿ ಬ್ರಿಟನ್ ದಂಪತಿ ಲಂಡನ್ ನ್ಯಾಯಾಲಯದಲ್ಲಿ ಅರ್ಜಿ ಹಾಕಿ ತಮ್ಮ ಪರ ತೀರ್ಪು ತೆಗೆದುಕೊಂಡು ಬಂದ ಅಪರೂಪದ ವಿದ್ಯಮಾನ ವರದಿಯಾಗಿದೆ.
 
ಆದಾಗ್ಯೂ, ಲಂಡನ್ ನ್ಯಾಯಾಲಯ ನೀಡಿದ ತೀರ್ಪನ್ನು ಇಲ್ಲಿ ಅನುಷ್ಠಾನಗೊಳಿಸುವುದು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದ್ದು, ಈ ಮೂಲಕ ಕೆಎಸ್ಆರ್ಟಿಸಿ ಪರ ತೀರ್ಪು ನೀಡಿದೆ.

ಲಂಡನ್ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಬ್ರಿಟಿಷ್ ದಂಪತಿಗಳು ಮಾಡಿರುವ ಮನವಿ ಅರ್ಜಿಯನ್ನು ಪರಿಗಣಿಸಿ ಆ ತೀರ್ಪನ್ನು ಇಲ್ಲಿ ಕಾರ್ಯಗತಗೊಳಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

2002 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ಅಪಘಾತಕ್ಕೀಡಾಗಿದ್ದ ದಂಪತಿ ಲಂಡನ್ನ ನ್ಯಾಯಾಲಯದಲ್ಲಿ ಪರಿಹಾರಕ್ಕಾಗಿ ಕೆಎಸ್ಆರ್ಟಿಸಿ ವಿರುದ್ಧ ಮೊಕದ್ದಮೆ ಹೂಡಿದ್ದರು. ಅಲ್ಲಿ ಅವರ ಪರವಾಗಿ ತೀರ್ಪು ಬಂದಿತ್ತು. ಬ್ರಿಟಿಷ್ ನ್ಯಾಯಾಲಯದ ಆದೇಶವನ್ನು ಭಾರತದಲ್ಲಿ ಕಾರ್ಯಗತಗೊಳಿಸಬೇಕೆಂದು ದಂಪತಿ ಪ್ರಯತ್ನಿಸಿದ್ದರು. ಆದರೆ ನ್ಯಾಯಮೂರ್ತಿ ಎಚ್ಪಿ ಸಂದೇಶ್ ಅವರು ಜುಲೈ 14 ರಂದು ನೀಡಿದ ತೀರ್ಪಿನಲ್ಲಿ ಅದನ್ನು ತಿರಸ್ಕರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ : ಸುಪ್ರೀಂ