ದಸರಾ ಆನೆಗಳ ಜತೆ ರೀಲ್ಸ್‌ ಮಾಡಿ ಚೆಲ್ಲಾಟವಾಡಿದ ಯುವತಿಗೆ ಬಿಗ್‌ ಶಾಕ್‌

Sampriya
ಶನಿವಾರ, 20 ಸೆಪ್ಟಂಬರ್ 2025 (15:54 IST)
Photo Credit X
ಮೈಸೂರು: ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ವಾಸ್ತವ್ಯ ಸ್ಥಳಕ್ಕೆ ಅನುಮತಿ ಪಡೆಯದೆ ಹೋಗಿ ಆನೆಗಳೊಂದಿಗೆ ಅಪಾಯಕಾರಿ ರೀಲ್ಸ್ ಮಾಡಿ, ಟೀಕೆಗೆ ಗುರಿಯಾಗಿದ್ದ ಯುವತಿ ವಿರುದ್ಧ ಇದೀಗ ಪ್ರಕರಣ ದಾಖಲಾಗಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ಗುರುವಾರ ರಾತ್ರಿ ಅನುಮತಿ ಪಡೆಯದೆ ಆನೆಗಳು ವಾಸ್ತವ್ಯವಿದ್ದ ಸ್ಥಳಕ್ಕೆ ತೆರಳಿ ಆನೆಗಳೊಂದಿಗೆ ಅಪಾಯಕಾರಿಯಾಗಿ ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಯುವತಿ ಹರಿಬಿಟ್ಟಿದ್ದಳು. 

ಯುವತಿಯ ನಡೆ ಹಾಗೂ ನಿಯಮ ಉಲ್ಲಂಘಟನೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಅರಣ್ಯ ಅಧಿಕಾರಿಗಳು ಇದೀಗ ಯುವತಿ ವಿರುದ್ಧ ಪ‍್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ. 

ಅರಮನೆ ಆವರಣದಲ್ಲಿ ಆನೆ ಹಾಗೂ ಮಾವುತರ ಕುಟುಂಬದ ವಾಸ್ತವ್ಯಕ್ಕೆ ಅರಣ್ಯ ಇಲಾಖೆ ವ್ಯವಸ್ಥೆ ಮಾಡಿದ್ದು, ಅಲ್ಲಿಗೆ ಹೋಗಲು ಅನುಮತಿ ಪಡೆಯುವುದು ಕಡ್ಡಾಯ. ಇದನ್ನು ಉಲ್ಲಂಘಿಸಿ ಯುವತಿ ಆನೆಯ ಬಳಿಗೆ ತೆರಳಿ, ಸೊಂಡಿಲನ್ನು ತಬ್ಬಿಕೊಂಡು ಮುದ್ದಾಡಿರುವ ವಿಡಿಯೋ ಚಿತ್ರೀಕರಿಸಿದ್ದಾರೆ. ವಿಡಿಯೊ ನೋಡಿದ ಹಲವರು ಅರಣ್ಯ ಇಲಾಖೆಯ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

‘ಸಿಬ್ಬಂದಿಯ ಕಣ್ತಪ್ಪಿಸಿ ಆನೆಯ ಬಳಿಗೆ ತೆರಳಿದ್ದ ಯುವತಿಯನ್ನು ಪತ್ತೆ ಹಚ್ಚಲಾಗುವುದು. ಅನುಮತಿ ಪಡೆಯದೆ ಆನೆ ಬಳಿ ತೆರಳಿ ವಿಡಿಯೊ ಹಾಗೂ ಫೊಟೊ ತೆಗೆದವರ ವಿರುದ್ಧ ಈ ಹಿಂದೆ ಮೂರು ಪ್ರಕರಣ ದಾಖಲಿಸಿಕೊಂಡು ₹1 ಸಾವಿರ ದಂಡ ವಿಧಿಸಿದ್ದೇವೆ’ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಬಿ. ಪ್ರಭುಗೌಡ ತಿಳಿಸಿದ್ದಾರೆ<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿ ನಾಯಕರ ಮಾತಿಗೆ ರೈತರು ಮರಳಾಗಬೇಡಿ: ಸಿಎಂ ಸಿದ್ದರಾಮಯ್ಯ

ಅದೆಲ್ಲಾ ಯಾವ ಪುರುಷಾರ್ಥಕ್ಕೆ ಎಂದಿದ್ಯಾಕೆ ಎಚ್ ಡಿ ಕುಮಾರಸ್ವಾಮಿ

Meerut Saurabh Rajput Case: ಊರೇ ಬಿಡಲು ಮುಂದಾದ ಆರೋಪಿ ಮುಸ್ಕಾನ್ ಕುಟುಂಬ

ಗಾಲಿಕುರ್ಚಿಯಲ್ಲಿ ಕೂತಿದ್ದ ಪ್ರತೀಕಾ ರಾವಲ್‌ ನೋಡಿ ಮೋದಿ ಏನ್ಮಾಡಿದ್ರೂ ನೋಡಿ

ಬೆಂಗಳೂರು ಎರ್ನಾಕುಲಂ ಸೇರಿದಂತೆ ನಾಲ್ಕು ವಂದೇ ಭಾರತ್ ರೈಲುಗಳಿಗೆ ನರೇಂದ್ರ ಮೋದಿ ಚಾಲನೆ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments