Publish Date: Sat, 29 Feb 2020 (10:19 IST)
Updated Date: Sat, 29 Feb 2020 (10:21 IST)
ರಾಯಚೂರು : ಏತನೀರಾವರಿ ವಿಚಾರದ ಕುರಿತು ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡಗೆ ಸಿಂಧನೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಂಧೂರಿನಲ್ಲಿ ಕಾರ್ಯಕ್ರಮವೊಂದಕ್ಕೆ ಶಾಸಕ ವೆಂಕಟರಾವ್ ನಾಡಗೌಡ ತೆರಳಿದ ವೇಳೆ ಏತನೀರಾವರಿ ವಿಚಾರದ ಕುರಿತು ಅಲ್ಲಿನ ಗ್ರಾಮಸ್ಥರು ಕೇವಲ ಭರವಸೆ ನೀಡದೆ ಕೆಲಸ ಮಾಡಿ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದರಲ್ಲಿ ಒಬ್ಬ ಗ್ರಾಮಸ್ಥ ಶಾಸಕರ ಜೊತೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೆ ಗರಂ ಆದ ಶಾಸಕ ವೆಂಕಟರಾವ್ ನಾಡಗೌಡ, ನೀನು ಯಾರಿಗೆ ವೋಟ್ ಹಾಕಿದ್ದೀಯಾ ಅವರನ್ನೇ ಕೇಳು ಹೋಗು ಎಂದು ಗದರಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.