Select Your Language

Notifications

webdunia
webdunia
webdunia
webdunia

ತಲೆ ನೋವು ನಿವಾರಕದ ಡಬ್ಬಿ ನುಂಗಿ 9 ತಿಂಗಳ ಮಗು ಸಾವು!

ತಲೆ ನೋವು ನಿವಾರಕದ ಡಬ್ಬಿ ನುಂಗಿ 9 ತಿಂಗಳ ಮಗು ಸಾವು!
ಬಳ್ಳಾರಿ , ಶನಿವಾರ, 10 ಜೂನ್ 2023 (11:43 IST)
ಬಳ್ಳಾರಿ : ಒಂಬತ್ತು ತಿಂಗಳ ಮಗು  ತಲೆ ನೋವು ನಿವಾರಕದ ಡಬ್ಬಿ ನುಂಗಿ ದಾರುಣವಾಗಿ ಮೃತಪಟ್ಟ ಘಟನೆ ಬಳ್ಳಾರಿ  ಜಿಲ್ಲೆ ಕಂಪ್ಲಿ ಪಟ್ಟಣದ 5ನೇ ವಾರ್ಡ್ ಇಂದಿರಾನಗರದಲ್ಲಿ ನಡೆದಿದೆ.

ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿ ಏಕೈಕ ಪುತ್ರಿ ಪ್ರಿಯದರ್ಶಿನಿ ಸಾವನ್ನಪ್ಪಿದ ದುರ್ದೈವಿ. ಶುಕ್ರವಾರ ಸಂಜೆ ಆಟವಾಡುತ್ತಿದ್ದಾಗ ಪ್ರಿಯದರ್ಶಿನಿ ಚಿಕ್ಕ ಡಬ್ಬಿಯನ್ನು ನುಂಗಿದ್ದಾಳೆ.  

ಡಬ್ಬಿ ನುಂಗಿದ ಪರಿಣಾಮ ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿದೆ.  ಉಸಿರಾಟದ ತೊಂದರೆ ಹೆಚ್ಚಾದ ಬೆನ್ನಲ್ಲೇ ಗಾಬರಿಯಾದ ಪೋಷಕರು ಖಾಸಗಿ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ.
ದೇಹ ಪರೀಕ್ಷಿಸಿದ ವೈದ್ಯರು ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಸೇರಿ 3 ರಾಜ್ಯಗಳಿಗೆ ಅಲರ್ಟ್