Select Your Language

Notifications

webdunia
webdunia
webdunia
webdunia

19 ವರ್ಷದ ಯುವತಿಯ ಮೇಲೆ ತಾಯಿಯ ಗೆಳೆಯನಿಂದಲೇ ಅತ್ಯಾಚಾರ

19 ವರ್ಷದ ಯುವತಿಯ ಮೇಲೆ ತಾಯಿಯ ಗೆಳೆಯನಿಂದಲೇ ಅತ್ಯಾಚಾರ
ಮುಂಬೈ , ಗುರುವಾರ, 7 ಫೆಬ್ರವರಿ 2019 (05:24 IST)
ಮುಂಬೈ : 19 ವರ್ಷದ ಯುವತಿಯ ಮೇಲೆ ತಾಯಿಯ ಗೆಳೆಯನೇ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ರಿತೇಶ್ ಪಾದ್ಗಲ್ವಾರ್ (36) ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು, ಸಂತ್ರಸ್ತೆ ತಾಯಿಯ ಸ್ನೇಹಿತನಾಗಿದ್ದ ಈತ ಸ್ವಂತ ಕ್ಯಾಟರಿಂಗ್ ವ್ಯಾಪಾರ ಮಾಡುತ್ತಿದ್ದನು. ಅಷ್ಟೇ ಅಲ್ಲದೇ ಪತಿಯನ್ನು ಬಿಟ್ಟು ಬಂದು ಬೇರೆ ವಾಸಿಸುತ್ತಿದ್ದ ಸಂತ್ರಸ್ತೆಯ ತಾಯಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು.

 

ನಂತರ ಆರೋಪಿ ರಿತೇಶ್ ಸಂತ್ರಸ್ತೆ ಮನೆಯಲ್ಲಿ ಅವರೊಂದಿಗೆ ವಾಸಿಸತೊಡಗಿದ್ದು, ಮನೆಯಲ್ಲಿ ಯುವತಿಗೆ ಯಾವಾಗಲೂ ಕಿರುಕುಳ ನೀಡುತ್ತಿದ್ದನು. ಆದರೆ ಮಂಗಳವಾರ ತಾಯಿ ಮಗಳನ್ನು ಬಿಟ್ಟು ಕೆಲಸಕ್ಕೆ ಹೋಗಿದ್ದ ವೇಳೆ ಆತ ಆಕೆಗೆ ತನ್ನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಕೇಳಿಕೊಂಡಿದ್ದಾನೆ. ಇದಕ್ಕೆ ಸಂತ್ರಸ್ತೆ ನಿರಾಕರಿಸಿದ ಕಾರಣ ಆರೋಪಿ ಬಲವಂತವಾಗಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

 

ತಾಯಿ ಮನೆಗೆ ಬಂದ ತಕ್ಷಣ ನಡೆದ ಘಟನೆಯನ್ನು ವಿವರಿಸಿದ್ದಾರೆ. ಕೂಡಲೇ ಇಬ್ಬರು ಜರಿಪತ್ಕಾ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 376 (2)(ಎಫ್) ಮತ್ತು 506 (ಬಿ) ಅಡಿಯಲ್ಲಿ ಆರೋಪಿ ರಿತೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು  ಆತನನ್ನು ಬಂಧಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಮೂಗ-ಕಿವುಡ ಮಹಿಳೆಯ ಮೇಲೆ ಪೊಲೀಸ್ ಹೋಂ ಗಾರ್ಡ್ ನಿಂದಲೇ ಅತ್ಯಾಚಾರ