Webdunia - Bharat's app for daily news and videos

Install App

99 ವರ್ಷದ ಟ್ರಾಫಿಕ್ ವಾರ್ಡನ್ ಇನ್ನಿಲ್ಲ

Webdunia
ಭಾನುವಾರ, 29 ಆಗಸ್ಟ್ 2021 (20:27 IST)
ಮಂಗಳೂರು ನಗರದ ಹಿರಿಯ ಟ್ರಾಫಿಕ್ ವಾರ್ಡನ್ ಆಗಿದ್ದ 99 ವರ್ಷದ ಜೋಸೆಫ್ ಗೊನ್ಸಾಲ್ವಿಸ್ ಎಂಬುವವರು ಇಂದು ನಿಧನರಾಗಿದ್ದಾರೆ.
ಜನವರಿ 1, 1921 ರಂದು ಜನಿಸಿದ ಜೋಸೆಫ್, 2015 ರಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಟ್ರಾಫಿಕ್ ವಾರ್ಡನ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಆಗ ಅವರಿಗೆ 94 ವರ್ಷ ವಯಸ್ಸಾಗಿತ್ತು.
ನಿವೃತ್ತಿಯ ನಂತರ ಸಮಾಜಕ್ಕೆ ಸೇವೆ ಮಾಡುವ ಉದ್ದೇಶದಿಂದ ಜೋ ಟ್ರಾಫಿಕ್ ವಾರ್ಡನ್ ಆಗಲು ನಿರ್ಧರಿಸಿದ್ದರು. ನಗು ಮುಖದೊಂದಿಗೆ ಜೋ ಅವರು ಮಂಗಳೂರಿನ ಹಾಟ್‌ ಸ್ಪಾಟ್‌ಗಳಲ್ಲಿ ಟ್ರಾಫಿಕ್ ನಿರ್ವಹಿಸುತ್ತಿದ್ದರು. ಸುರಕ್ಷಿತ ಚಾಲನೆ ಮತ್ತು ಇತರ
ಪ್ರಮುಖ ವಿಷಯಗಳ ಕುರಿತು ಅವರು ಆಗಾಗ್ಗೆ ಯುವಜನರೊಂದಿಗೆ ಸಂವಾದ ನಡೆಸುತ್ತಿದ್ದರು.
2019 ರಲ್ಲಿ ಟ್ರಾಫಿಕ್ ನಿರ್ವಹಣೆಯಲ್ಲಿ ಶ್ಲಾಘನೀಯ ಕೆಲಸ ಮಾಡಿದ್ದಕ್ಕಾಗಿ ನಗರ ಪೊಲೀಸರು ಅವರನ್ನು ಗೌರವಿಸಿದ್ದರು. ಬ್ರಿಟಿಷ್ ಕಂಪೆನಿಯ ಉದ್ಯೋಗಿಯಾಗಿದ್ದರು. ಬಳಿಕ ಆ ಕಂಪೆನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಗಮನ ಸೆಳೆದಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Siddaramaiah: ಇದೆಲ್ಲಾ ಚೆನ್ನಾಗಿರಲ್ಲ, ಆಂಧ್ರಪ್ರದೇಶ ಸಿಎಂಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ

ಟೀಕೆಗಳ ಬಳಿಕ ಕೊನೆಗೂ ಹಣಕಾಸು ಆಯೋಗದ ಸಭೆಗೆ ಹೋಗಲು ತೀರ್ಮಾನಿಸಿದ ಸಿಎಂ ಸಿದ್ದರಾಮಯ್ಯ

Karnataka Caste census: ಜಾತಿಗಣತಿ ಮಾಡಲು ಯಾಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತದೆ, ಇಲ್ಲಿದೆ ಸೀಕ್ರೆಟ್

Chinnaswamy stampede: ವಿರಾಟ್ ಕೊಹ್ಲಿ ಸ್ನೇಹಿತನ ಭವಿಷ್ಯ ಇಂದು ನಿರ್ಧಾರ

Funny video: ಗೆಜ್ಜೆ ಕಟ್ಟಿಸಲು ಆಟ ಆಡಿಸಿದ ವಧು, ಕೊನೆಗೆ ಆಗಿದ್ದೇನು

ಮುಂದಿನ ಸುದ್ದಿ
Show comments