Webdunia - Bharat's app for daily news and videos

Install App

ಪಾಲಿಕೆ ವ್ಯಾಪ್ತಿಯ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆಯಲ್ಲಿ 847 ಕೋಟಿ ತೆರಿಗೆ ನಷ್ಟ

Webdunia
ಶುಕ್ರವಾರ, 24 ಸೆಪ್ಟಂಬರ್ 2021 (21:01 IST)
ಬೆಂಗಳೂರು: ಪ್ರತಿವರ್ಷ ಕೋಟ್ಯಾಂತರ ರೂಪಾಯಿಗಳಷ್ಟು ತೆರಿಗೆ ಹಣವನ್ನು ಉಳಿಸುವ ಉದ್ದೇಶದಿಂದ ಜಾರಿಗೊಳಿಸಲಾಗದ ಬೀದಿ ದೀಪಗಳಿಗೆ ಎಲ್ ಐಡಿ ಬಲ್ಬ್ ಅಳವಡಿಕೆ ಕಾರ್ಯಕ್ಕೆ ನಗರದ ಸಚಿವರು ಹಾಗೂ ಜನಪ್ರತಿನಿಧಿಗಳು ಅಡ್ಡಗಾಲು ಹಾಕುತ್ತಿದ್ದಾರೆ. ಅದರಲ್ಲಿ ಮೂರು ವರ್ಷಗಳಲ್ಲಿ 847 ಕೋಟಿ ರೂಪಾಯಿಗಳ ನಷ್ಟವಾಗಿದೆ, ಜನರ ತೆರಿಗೆ ಹಣದ ಅನಗತ್ಯ ವ್ಯಯವಾಗುವುದನ್ನು ನಿವಾರಿಸುತ್ತದೆ ಕೆಲವು ಮುಖ್ಯಮಂತ್ರಿಗಳು ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಕರೆಯುತ್ತಾರೆ 
 
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ದಾಸರಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್‌ಇಡಿ ಬಲ್ಬ್ ಗಳಿಕೆಗಾಗಿ ಷಹಾಪೊರ್ಜಿ ಪಲ್ಲೊಂಜಿ, ಎಸ್‌ಎಮ್‌ಎಸ್ ಇನ್‌ಪ್ರಾಸ್ಟ್ರಾಕ್ಚರ್ ಮತ್ತು ಸಮುದ್ರ ಎಲೆಕ್ಟ್ರಾನಿಕ್ ಸಿಸ್ಟಂಗಳನ್ನು ಹೊಂದಿರುವ ಕಂಪನಿಗಳ ಕನ್ಸೋರ್ಸಿಯಾಮ್ 2018 ಅಂತಹ ಬೀದಿ ದೀಪಗಳ ವಿದ್ಯುತ್ ಬಳಕೆಯ ಬಗ್ಗೆ ಅಧ್ಯಯನ ಮಾಡುವ ಉದ್ದೇಶದಿಂದ ಪಿಡಬ್ಲೂಸಿ ಸಂಸ್ಥೆಯನ್ನೂ ನೇಮಕಾತಿ. ಈ ಸಂಸ್ಥೆಯಲ್ಲಿ ನಡೆಸುತ್ತಿರುವ ಅಧ್ಯಯನದಲ್ಲಿ ಬಿಬಿಎಂಪಿ ಪ್ರತಿವರ್ಷ ತನ್ನ 4.85 ಲಕ್ಷ ಬೀದಿದೀಪಗಳ ನಿರ್ವಹಣೆಗೆ 240 ಕೋಟಿ ರೂ ವ್ಯಯವಾಗುತ್ತಿದೆ. ಅದರಲ್ಲಿ ಸುಮಾರು 200 ಕೋಟಿ ರೂ ಬೆಸ್ಕಾಂಗೆ ನೀಡಲಾಗುತ್ತಿದೆ. ವರ್ಷಪೂರ್ತಿ ಬೀದಿದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಈ ವೆಚ್ಚದಲ್ಲಿ 330 ಕೋಟಿಗಳಿಗೆ ತಲುಪುತ್ತದೆ ಎಂದು ಸ್ಥಳೀಯ ಆಡಳಿತ ಅಂದಾಜು ಮಾಡಿದೆ ಎಂದು ಹೇಳಿದರು.
 
ಜಾಗತಿಕ ಟೆಂಡರ್‌ ಕರೆಯುವ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ವೆಚ್ಚವನ್ನು 233 ಕೋಟಿ ರೂಪಾಯಿಗಳಿಗೆ ಇಳಿಸುವ ಅಂದಾಜು ಮಾಡಲಾಗಿತ್ತು. ಈ ಉಳಿತಾಯ ಎಲ್‌ಇಡಿ ವಿದ್ಯುತ್‌ ದೀಪಗಳ ಅಳವಡಿಕೆಯಿಂದಾಗುವ ವಿದ್ಯುತ್‌ ಬಳಕೆಯಲ್ಲಿನ ಇಳಿಕೆಯಿಂದ ಸಾಧ್ಯವಾಗುತ್ತಿತ್ತು. ವಿದ್ಯುತ್‌ ಬಳಕೆಯ ಪ್ರಮಾಣ 290 ಕೋಟಿ ರೂಪಾಯಿಗಳಿಂದ 33 ಕೋಟಿ ರೂಪಾಯಿಗಳಿಗೆ ಇಳಿಕೆಯಾಗುತ್ತಿತ್ತು. 5 ಲಕ್ಷ ಎಲ್‌ಇಡಿ ವಿದ್ಯುತ್‌ ದೀಪಗಳನ್ನು ಅಳವಡಿಸಿ ಅವುಗಳ ಸಮರ್ಪಕ ನಿರ್ವಹಣೆಯಿಂದ ಶೇ 85.50% ರಷ್ಟು ವಿದ್ಯುತ್‌ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಈ ಕನ್ಸೋರ್ಷಿಯಮ್‌ ಸುಮಾರು 175 ಕೋಟಿ ರೂ ಆದಾಯ ಪಡೆದುಕೊಳ್ಳುತ್ತಿತ್ತು ಎಂದು ಹೇಳಿದರು.
 
ಇಂತಹ ಉತ್ತಮ ಯೋಜನೆ ಕಾರ್ಯಗತಗೊಳಿಸುವಲ್ಲಿ ಅನಗತ್ಯ ವಿಳಂಬವಾಗುತ್ತಿದೆ. ಇದಕ್ಕೆ ನಮ್ಮ ರಾಜಕೀಯ ವ್ಯವಸ್ಥೆಯ ದುಷ್ಟ ಶಕ್ತಿಗಳ ಕಾರಣ. ಸೆಪ್ಟೆಂಬರ್‌ 9 ರಂದು ಯಶವಂತಪುರದಲ್ಲಿ ಎಲ್‌ ಇಡಿ ಬೀದಿದೀಪಗಳನ್ನು ಅಳವಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದ ನೌಕರರ ಮೇಲೆ ನಗರದ ಕೆಲ ಸಚಿವರು ಹಾಗೂ ಮಾಜಿ ಕಾರ್ಪೋರೇಟರ್‌ ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಅಲ್ಲದೆ, ಪ್ರತಿನಿತ್ಯ ಅವರ ಕೆಲಸ  ಕಾರ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಿಶ್ವವಿಖ್ಯಾತ ಬೆಂಗಳೂರು ನಗರದಲ್ಲೇ ಇಂತಹ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಿಷಾಧನೀಯ. ಕಳೆದ ಮೂರು ವರ್ಷಗಳಲ್ಲಿ ಈ ಯೋಜನೆ ಕಾರ್ಯಗತವಾಗಿದ್ದರೆ ಸುಮಾರು 847 ಕೋಟಿ ರೂಪಾಯಿಗಳ ಉಳಿತಾಯ ಆಗುತ್ತಿತ್ತು. ಆದರೆ ರಾಜಕೀಯ ಪ್ರತಿನಿಧಿಗಳ ದುಷ್ಟ ಮನಸ್ಥಿತಿಯಿಂದ ಇದು ಸಾಧ್ಯವಾಗಿಲ್ಲ. ಈ ನಷ್ಟವನ್ನು ಕಳೆದ ಮೂರು ವರ್ಷಗಳಲ್ಲಿ ಬಿಬಿಎಂಪಿ ಆಡಳಿತ ನಡೆಸಿದ ಜೆಸಿಬಿ ಪಕ್ಷಗಳಿಂದ ವಸೂಲು ಮಾಡಿಕೊಳ್ಳಬೇಕು ಎಂದು ಮೋಹನ್‌ ದಾಸರಿ ಆಗ್ರಹಿಸಿದರು. 
 
ನಗರದ ಜನತೆಯ ಕೋಟ್ಯಾಂತರ ರೂಪಾಯಿ ಹಣವನ್ನು ಉಳಿಸುವಂತಹ ಯೋಜನೆಗೆ ಅಡ್ಡಗಾಲು ಹಾಕುವ ಮೂಲಕ ಮೂರು ಪಕ್ಷದ ರಾಜಕಾರಣಿಗಳು ಅಭಿವೃದ್ದಿಯ ಪರವಲ್ಲ ಎಂದು ಧೋರಣೆಯನ್ನು ತೋರಿಸಿದ್ದಾರೆ. ಮುಖ್ಯಮಂತ್ರಿಗಳು ಈ ತಕ್ಷಣ ಮಧ್ಯ ಪ್ರವೇಶಿಸಬೇಕು ಮತ್ತು ಬೀದಿ ದೀಪಗಳ ಎಲ್ ಇಡಿ ಅಳವಡಿಕೆಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಲಾಗಿದೆ.
ರಾಜಕೀಯ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments