Publish Date: Sun, 26 Feb 2023 (11:16 IST)
Updated Date: Sun, 26 Feb 2023 (11:22 IST)
ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಜಾಗಟಗಲ್ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ 8 ಗುಡಿಸಲು ಹಾಗೂ ಹತ್ತಿ ಬೆಳೆ ಭಸ್ಮವಾಗಿದ್ದು, ಕೋಟ್ಯಂತರ ರೂಪಾಯಿ ಹಾನಿ ಸಂಭವಿಸಿದೆ.
ಅಂದಾಜು 1 ಸಾವಿರ ಕ್ವಿಂಟಾಲ್ ಹತ್ತಿ, 30 ಲಕ್ಷ ನಗದು, ಚಿನ್ನಾಭರಣ ಅಗ್ನಿಗಾಹುತಿಯಾಗಿದೆ. ಆಂಧ್ರಪ್ರದೇಶ ಮೂಲದ ನಾಗೇಶ್ವರರಾವ್, ರಾಮಕೃಷ್ಣ, ಶೇಷಯ್ಯ ಎಂಬುವವರಿಗೆ ಸೇರಿದ ಗುಡಿಸಲುಗಳಿಗೆ ಬೆಂಕಿ ತಗುಲಿದ್ದು, ಗುಡಿಸಲುಗಳಲ್ಲಿದ್ದ ದವಸ ಧಾನ್ಯ ಸೇರಿ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ.
ಎರಡು ಬೈಕ್ಗಳು ಸಂಪೂರ್ಣ ಸುಟ್ಟಿವೆ, ಅಡುಗೆ ಅನಿಲದ ಸಿಲಿಂಡರ್ ಸ್ಫೋಟಿಸಿವೆ. ಒಂದು ಕೋಟಿ ರೂ.ಗೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಮೆಣಸಿನಕಾಯಿ ಬೆಳೆ ಮಾರಾಟ ಮಾಡಿದ್ದ ಲಕ್ಷಾಂತರ ರೂ. ನಗದು ಸಹ ಅಗ್ನಿ ಪಾಲಾಗಿದೆ.