Webdunia - Bharat's app for daily news and videos

Install App

73ನೇ ಗಣರಾಜ್ಯೋತ್ಸವದ ಸಂಭ್ರಮ: ರಾಜಪಥದಲ್ಲಿ ಭರ್ಜರಿ ತಯಾರಿ

Webdunia
ಬುಧವಾರ, 26 ಜನವರಿ 2022 (20:54 IST)
ಇಂದು ದೇಶಾದ್ಯಂತ 73ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಎಲ್ಲೆಡೆ ಬಿಗಿ ಭದ್ರತೆ ಮಾಡಲಾಗಿದೆ.
 
ದೆಹಲಿಯ ರಾಜಪಥದಲ್ಲಿ ಭಾರತೀಯ ಸೈನ್ಯವನ್ನೊಳಗೊಂಡ ಪರೇಡ್​ ನಡೆಯಲಿದೆ. ರಾಷ್ಟ್ರಪತಿ ರಾಜನಾಥ್‌ ಕೋವಿಂದ್‌ ಅವರು ರಾಜಪಥದ ಬಳಿ ಧ್ವಜಾರೋಹಣ ನಡೆಸಲಿದ್ದಾರೆ.
 
ಈ ಬಾರಿಯ ಗಣರಾಜ್ಯೋತ್ಸವದ ಆಚರಣೆಯಲ್ಲಿ ಭಾರತೀಯ ಭೂಸೇನೆ, ವಾಯುಸೇನೆ, ನೌಕಾಪಡೆಗೆ ಸೇರಿದ 75 ವಿಮಾನಗಳು ಹಾರಾಟ ನಡೆಸಲಿವೆ. ಬಳಿಕ ಪದ್ಮ ಪುರಸ್ಕೃತರಿಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸೈನಿಕರಿಗೆ ಪರಮವೀರ ಚಕ್ರ, ಅಶೋಕ ಚಕ್ರ, ವೀರ ಚಕ್ರಗಳನ್ನು ನೀಡಿ ಗೌರವಿಸಲಾಗುತ್ತದೆ.
 
ಕಲೆ, ಸಂಸ್ಕೃತಿ, ಸೇನಾ ಸಾಮರ್ಥ್ಯವನ್ನು ಪ್ರದರ್ಶಸಿಲು ರಾಜಪಥ ಸಜ್ಜಾಗಿದೆ. ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವವಾದ ಹಿನ್ನೆಲೆಯಲ್ಲಿ ಗಣರಾಜ್ಯ ದಿನವನ್ನು ಕೂಡ ವಿಶೇಷವಾಗಿ ಆಚರಿಸಲಾಗುತ್ತಿದೆ. ಗಣರಾಜ್ಯೋತ್ಸವ  ಪಥಸಂಚಲನಕ್ಕೆ ಈ ಬಾರಿ ಇಂಡಿಯಾ 75  ಎಂದು ಥೀಮ್ ನೀಡಲಾಗಿದೆ.
 
ಇಂದಿನ ಕಾರ್ಯಕ್ರಮಕ್ಕೆ ರಾಜಪಥದಲ್ಲಿ 6 ಪ್ರವೇಶ ದ್ವಾರ ಇರಿಸಲಾಗಿದೆ. ರಾಜಪಥದ ಸುತ್ತ 500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
 
ಭದ್ರತೆ ದೃಷ್ಟಿಯಿಂದ ಇಡೀ ರಾಜಪಥವನ್ನು 30 ಸಾವಿರ ಪೊಲೀಸರು ಸುತ್ತುವರಿಸಿದ್ದಾರೆ. 65 ಪ್ಯಾರಾ ಮಿಲಿಟರಿ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದೇ ವೇಳೆ 71 ಡಿಸಿಪಿಗಳು, 213 ಎಸಿಪಿಗಳು, 753 ಇನ್ಸ್ ಪೆಕ್ಟರ್ ಗಳು ಭದ್ರತೆ ಉಸ್ತುವಾರಿ ವಹಿಸಿದ್ದಾರೆ.
 
ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಜನತೆಗೆ ಗಣರಾಜ್ಯೋತ್ಸವದ ಶುಭಕೋರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments