Select Your Language

Notifications

webdunia
webdunia
webdunia
webdunia

ಹಳ್ಳದಲ್ಲಿ 7 ಭ್ರೂಣ ಪತ್ತೆ: ಬೆಳಗಾವಿ ಆಸ್ಪತ್ರೆ ಸೀಜ್

ಹಳ್ಳದಲ್ಲಿ 7 ಭ್ರೂಣ ಪತ್ತೆ: ಬೆಳಗಾವಿ ಆಸ್ಪತ್ರೆ ಸೀಜ್
bengaluru , ಶನಿವಾರ, 25 ಜೂನ್ 2022 (13:35 IST)

ಮೂಡಲಗಿ ಪಟ್ಟಣದ ಹಳ್ಳದಲ್ಲಿ ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಡಿಎಚ್ ಮಹೇಶ್ ಕೋಣಿ, ಮೂಡಲಗಿ  ಪೊಲೀಸರ ನೇತೃತ್ವದಲ್ಲಿ ಸ್ಕ್ಯಾನಿಂಗ್ ಸೆಂಟರ್, ಆರು ಮೆಟರ್ನಿಟಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ಮತ್ತು ಮೂಡಲಗಿ ತಾಲೂಕಿನಲ್ಲಿ ಬೆಳಗಾವಿ ಡಿಎಚ್ ನೇತೃತ್ವದ ತಂಡ ನವಜೀವನ ಆಸ್ಪತ್ರೆ ಹಾಗೂ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ಸೇರಿದಂತೆ ಒಟ್ಟು ಆರು ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ಹಾಗೂ ನವಜೀವನ ಆಸ್ಪತ್ರೆಗಳ ಕೈವಾಡ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಎರಡು ಆಸ್ಪತ್ರೆಗಳನ್ನು ಡಿಎಚ್ ಮಹೇಶ್ ಕೋಣಿ ಸೀಜ್ ಮಾಡಿದ್ದಾರೆ.

ಶುಕ್ರವಾರ ದಾಳಿ ನಡೆದಂತಹ ಸಂದರ್ಭದಲ್ಲಿ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ವೈದ್ಯೆ ಡಾ.ವೀಣಾ ಕಣಕರೆಡ್ಡಿ ಏಳು ಭ್ರೂಣಗಳು ತಾವೇ ಎಸೆದಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾರೆ. ಆಸ್ಪತ್ರೆಯ ಪಾಮೋಲಿನನಲ್ಲಿ ಭ್ರೂಣಗಳನ್ನು ಪ್ರಿಸರ್ವ್ ಮಾಡಿ ಬಾಟಲ್ನಲ್ಲಿ ಇಡಲಾಗಿತ್ತು. ಅಧಿಕಾರಿಗಳ ದಾಳಿಗೆ ಹೆದರಿ ಹಳೆಯ ಆಸ್ಪತ್ರೆಯಿಂದ ಹೊಸ ಆಸ್ಪತ್ರೆಗೆ


Share this Story:

Follow Webdunia kannada

ಮುಂದಿನ ಸುದ್ದಿ

ವೇಶ್ಯಾಗೃಹಕ್ಕೆ ತೆರಳುವುದು ಅಪರಾಧಿಯಲ್ಲ : ಹೈಕೋರ್ಟ್