Publish Date: Mon, 18 Sep 2017 (11:20 IST)
Updated Date: Mon, 18 Sep 2017 (11:24 IST)
ನಿನ್ನೆ ಕಾರವಾರದ ನಾಗರಮಡಿ ಫಾಲ್ಸ್`ನಲ್ಲಿ ಕೊಚ್ಚಿ ಹೋಗಿದ್ದ 6 ಪ್ರವಾಸಿಗರ ಪೈಕಿ 5 ಪ್ರವಾಸಿಗರ ಶವ ಸಿಕ್ಕಿವೆ. 3 ಯುವತಿಯರ ಶವ ಮತ್ತು ಇಬ್ಬರು ಪುರುಷರ ಶವಗಳು ಸಿಕ್ಕಿವೆ. ಇನ್ನುಳಿದ ಒಂದು ಶವಕ್ಕಾಗಿ ಶೋಧ ಮುಂದುವರೆದಿದೆ.
ಗೋವಾದಿಂದ ಕಾರವಾರದ ಚಂಡಿಯಾ ಗ್ರಾಮದ ಬಳಿ ಇರುವ ನಾಗರಮಡಿ ಫಾಲ್ಸ್`ನಲ್ಲಿ 20 ಪ್ರವಾಸಿಗರ ತಂಡ ನಿನ್ನೆ ಆಗಮಿಸಿತ್ತು. ಮದ್ಯಪಾನ ಮಾಡಿ ಪ್ರವಾಸಿಗರು ಫಾಲ್ಸ್`ಗೆ ಇಳಿದಿದ್ದರು. ಈ ಸಂದರ್ಭ ಮಳೆಯಿಂದಾಗಿ ಜಲಪಾತದ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಕೊಚ್ಚಿ ಹೋಗಿದ್ದರು ಸ್ಥಳೀಯರು ಮತ್ತು ಭದ್ರತಾ ಸಿಬ್ಬಂದಿ ರಕ್ಷಣೆಗೆ ಪ್ರಯತ್ನಿಸಿದರಾದರೂ ಭೋರ್ಗರೆಯುತ್ತಿದ್ದ ನೀರಿನಲ್ಲಿ ರಕ್ಷಿಸಲು ಸಾಧ್ಯವಾಗಿರಲಿಲ್ಲ. ಕೊಚ್ಚಿಹೋದವರ ಪೈಕಿ ನಿನ್ನೆ 2 ಶವಗಳು ಸಿಕ್ಕಿದ್ದವು. ಇವತ್ತು ಮೂರು ಶವಗಳು ಸಿಕ್ಕಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಮೃತರನ್ನ ಮಡಗಾಂವ್ ಮೂಲದ ಫ್ರೆನ್ಸಿಲ್ಲಾ ಪೈರ್ಸ್, ಫಿಯಾನಾ ಪಚೆಕೋ, ಮರ್ಸೆಲಿನಾ ಎಸ್ಟಿಬೆರೋ, ಸಮೀರ್ ಗವಾಡೆ, ಸಿದ್ದುಚಾರಿ, ರೇಣುಕಾ ಎಂದು ಗುರ್ತಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ