Select Your Language

Notifications

webdunia
webdunia
webdunia
Saturday, 12 April 2025
webdunia

ವಿಧಾನಸೌಧ ಮೇಲೆ ಧ್ವಜಾರೋಹಣಕ್ಕೆ ದಿನಕ್ಕೆ 50ರೂ ಭತ್ಯೆ..!!!

Crime
ಬೆಂಗಳೂರು , ಶುಕ್ರವಾರ, 5 ಆಗಸ್ಟ್ 2022 (17:23 IST)
ವಿಧಾನ ಸೌಧದ (Vidhana Soudha) ಮೇಲೆ ಪ್ರತಿನಿತ್ಯ ವರ್ಷಗಳಿಂದ 50 ರೂಪಾಯಿ ನಿಯಮಿತ ವೇತನಕ್ಕೆ ವಿಧಿವತ್ತಾಗಿ ತ್ರಿವರ್ಣ ಧ್ವಜ ಹಾರಿಸುವ (Hoisters) ಅಪ್ರಪತಿಮ ವೀರರಿದ್ದಾರೆ. ಇವರು ತಮ್ಮ ವೇತನವನ್ನು (Wages) 100 ರೂಪಾಯಿಗೆ ಹೆಚ್ಚಿಸಬೇಕೆಂದು ಬೇಡಿಕೆಯಿಟ್ಟರು ಇನ್ನೂ ಇವರ ಬೇಡಿಕೆ ಈಡೇರಲಿಲ್ಲ.
 
100 ರೂಪಾಯಿಗೆ ಭತ್ಯೆಯನ್ನು ಹೆಚ್ಚಿಸಿ ಎಂಬ ಬೇಡಿಕೆ
ಪ್ರತಿ ನಿತ್ಯ ವಿಧಾನ ಸೌಧದಲ್ಲಿ ಧ್ವಜ ಹಾರಿಸುತ್ತಿರುವ ಏಳು ಮಂದಿ ನೌಕರರು ಗ್ರೂಪ್ ಡಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಪ್ರತಿ ನಿತ್ಯ 3 ಶಿಪ್ಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಹೋಮ್ ಗಾರ್ಡ್ ಅಥವ ಪೋಲಿಸ್ ಸಿಬ್ಬಂದಿಯೊಂದಿಗೆ ಕೆಲಸ ಮಾಡುತ್ತಾರೆ. ಅವರು ತಮ್ಮ ಈ ಕೆಲಸದ ವೇತನವನ್ನು 100 ರೂಪಾಯಿಗೆ ಹೆಚ್ಚಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ.
 
ಧ್ವಜಸ್ತಂಭ ಇಲ್ಲಿರುವ ನಾಲ್ಕನೇ ಮಹಡಿಯಿಂದ 30 ಅಡಿ ಎತ್ತರವಿದೆ. ಈ ನಾಲ್ಕನೇ ಮಹಡಿಯು ನೆಲದಿಂದ 150 ಅಡಿ ಎತ್ತರದಲ್ಲಿದೆ. ಅಂದರೆ ನಾವು ವಿಧಾನಸೌಧದ ಹೊರಗಿನಿಂದ ನೋಡುವ ಹಾರುತ್ತಿರುವ ಧ್ವಜ ನೆಲಮಟ್ಟದಿಂದ 180 ಅಡಿ ಎತ್ತರದಲ್ಲಿ ಹಾರಾಡುತ್ತಿವೆ.
 
ಧ್ವಜ ಕರ್ತವ್ಯದಲ್ಲಿರುವ ಇಲ್ಲಿನ ನೌಕರರು ಮೂರನೇ ಮಹಡಿಯವರೆಗೆ ಲಿಫ್ಟ್‌ಗಳನ್ನು ಬಳಸುತ್ತಾರೆ ಮತ್ತು ನಂತರ ಮೆಟ್ಟಿಲುಗಳ ಮೂಲಕ ಮೇಲೆ ಹೋಗಿ ಅಲ್ಲಿ ಧ್ವಜ ಹಾರಿಸುವ ಕಾರ್ಯ ನಿರ್ವಹಿಸುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾಹೀರಾತುಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುವಂತಿಲ್ಲ!