Webdunia - Bharat's app for daily news and videos

Install App

ಸಾಲ ಕೊಡಿಸೋದಾಗಿ ನಂಬಿಸಿ 5.85 ಕೋಟಿ ರೂ. ಮೋಸ!

Webdunia
ಮಂಗಳವಾರ, 28 ಡಿಸೆಂಬರ್ 2021 (08:35 IST)
ಬೆಂಗಳೂರು : ಕಡಿಮೆ ಬಡ್ಡಿ ದರದಲ್ಲಿ 400 ಕೋಟಿ ರೂ. ಸಾಲ ಕೊಡಿಸುವುದಾಗಿ ನಂಬಿಸಿ ಇಬ್ಬರು ಉದ್ಯಮಿಗಳಿಂದ ಮುಂಗಡವಾಗಿ 5.85 ಕೋಟಿ ರೂ. ಬಡ್ಡಿ ಪಡೆದು ವಂಚಿಸಿದ್ದ ಐದು ಮಂದಿ ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
 

ಕೇರಳ ಮೂಲದ ಸೈಯ್ಯದ್ ಇಬ್ರಾಹಿಂ ಅಲಿಯಾಸ್ ಡ್ಯಾನಿಯಲ್ ಆರ್ಮ್ಸ್ಟ್ರಾಂಗ್, ಕೊಯಮತ್ತೂರಿನ ವಿವೇಕ್ ಅಲಿಯಾಸ್ ವಿಕ್ಕಿ ಅಲಿಯಾಸ್ ವಿವೇಕಾನಂದ, ಕ್ರಿಸ್ಟೋಫರ್ ಅಲಿಯಾಸ್ ರಾಘವನ್, ರಘುವರನ್ ಅಲಿಯಾಸ್ ರಘು, ಶಿವರಾಮನ್ ಅಲಿಯಾಸ್ ನಾಗರಾಜು ಬಂಧಿತರು.

ಆರೋಪಿಗಳಿಂದ 4.10 ಕೋಟಿ ರೂ. ಮೌಲ್ಯದ 8 ಕೆ.ಜಿ 215 ಗ್ರಾಂ ಚಿನ್ನಾಭರಣ, 35 ಲಕ್ಷ ರೂ. ಬೆಲೆ ಬಾಳುವ ಬಿಎಂಡಬ್ಲ್ಯು ಕಾರು, 10 ಲಕ್ಷ ರೂ. ಗಳ ಎರ್ಟಿಗಾ, 36.60 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. 1.86 ಲಕ್ಷ ರೂ. ಫ್ರೀಜ್ ಮಾಡಲಾಗಿದೆ.

45 ಲಕ್ಷ ರೂ.ಗಳನ್ನು ಆರೋಪಿಗಳು ಖರ್ಚು ಮಾಡಿದ್ದಾರೆ. ಚಿನ್ನ ಖರೀದಿಗೆ ಸಂಬಂಧಿಸಿದಂತೆ 33 ಲಕ್ಷ ರೂ. ಜಿಎಸ್ಟಿ ಹಾಗೂ ಸಿಎಸ್ಟಿ ಪಾವತಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಾಲೆಯ ಕ್ಯಾಂಟೀನ್ ಪ್ಯಾಟೀಸ್ ಊಟ ಸೇವಿಸಿದ್ದ ಪಿಯುಸಿ ವಿದ್ಯಾರ್ಥಿ ಅನುಮಾನಸ್ಪದ ಸಾವು

ರಾಜ್ಯದಲ್ಲಿ ಗುಟ್ಕಾ, ಪಾನ್ ನಿಷೇಧ ಹಿಂಪಡೆದ ಸರ್ಕಾರ, ಡಿಕೆ ಶಿವಕುಮಾರ್ ಕೊಟ್ಟ ಕಾರಣ ಇಲ್ಲಿದೆ

ಇಂಡಿಗೋ ವಿಮಾನ ರದ್ದಾಗಿದ್ದಕ್ಕೆ ಕೋಪಗೊಂಡ ಮಹಿಳೆಯಿಂದ ₹49 ಸಾವಿರ ಮೌಲ್ಯದ ವಿಮಾನದ ಆಸ್ತಿ ಹಾನಿ, Video

ಬಹುಕೋಟಿ ವಂಚನೆ ಪ್ರಕರಣ, ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಶಿವಾನಂದ ಸಿದ್ದಪ್ಪ ಅರೆಸ್ಟ್

ಅಂದು ಮಹಿಳಾ ನಕ್ಸಲೈಟ್‌ಗಳಾಗಿದ್ದವರ ಕೈಯಲ್ಲಿ ಇಂದು ಕೈಮಗ್ಗ

ಮುಂದಿನ ಸುದ್ದಿ
Show comments