Daily Horoscope
✕

ನೋಯ್ಡಾದಲ್ಲಿ ಲಿಫ್ಟ್​ ಕುಸಿದು 4 ಮಂದಿ ಸಾವು

Webdunia
ಶನಿವಾರ, 16 ಸೆಪ್ಟಂಬರ್ 2023 (13:50 IST)
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ  ಭಾರೀ ಅಪಘಾತ ಸಂಭವಿಸಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲಿಫ್ಟ್ ಕುಸಿದು ಬಿದ್ದಿದೆ. ಈ ಅವಘಡದಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ. ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆ ಬಿಸ್ರಖ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಈ ಅಪಘಾತದಲ್ಲಿ ಕೆಲವರು ಗಾಯಗೊಂಡಿದ್ದಾರೆ, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಮ್ರಪಾಲಿ ಗ್ರೂಪ್‌ನ ಈ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಬೀಳಲು ಕಾರಣ ಇನ್ನೂ ತಿಳಿದುಬಂದಿಲ್ಲ. ಮೃತರೆಲ್ಲರೂ ಕೂಲಿ ಕಾರ್ಮಿಕರು ಎನ್ನಲಾಗಿದೆ. ಲಿಫ್ಟ್ ಕುಸಿತದಿಂದ ಸಂಭವಿಸಿದ ಅಪಘಾತದ ಬಗ್ಗೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇಶಕ್ಕಾಗಿ ಜೀವನ ಕಳೆದ ಅಜಿತ್ ದೋವಲ್ ನಿಮಗೆ ವಿಲನ್ ನಂತೆ ಕಾಣುತ್ತಾರಾ: ರಾಹುಲ್ ಗಾಂಧಿಗೆ ನೆಟ್ಟಿಗರು, ಬಿಜೆಪಿ ತರಾಟೆ

Karnataka Weather : ವಿವಿಧ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಹೇಗಿದೆ, ಇಲ್ಲಿದೆ ವಿವರ

ಏನಿದು ಸ್ಟಾರ್ಲಿಂಕ್, ಎಲಾನ್ ಮಸ್ಕ್ ಸ್ಟಾರ್ಲಿಂಕ್ ಭಾರತದ ಭದ್ರತೆ ಎಷ್ಟು ಅಪಾಯಕಾರಿ, ಗಮನಿಸಿ

ವಿಮಾನದಲ್ಲಿ ಅಭಿಜಿತ್ ದಿಪ್ಕೆ ವಶಕ್ಕೆ ಪಡೆಯುವಾಗ ದೇಶದಿಂದ ಹೊರಗೆ ಹಾಕಿ ಎಂದು ಕೂಗಿದ ಸಹಪ್ರಯಾಣಿಕರು: Video

ದಲಿತರ ಸಮಸ್ಯೆ ಕಡೆ ರಾಜ್ಯ ಗೃಹ ಸಚಿವರು ಗಮನ ಹರಿಸಲಿ: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments