Select Your Language

Notifications

webdunia
webdunia
webdunia
webdunia

ಪ್ರವೀಣ ಖಾಂಡ್ಯ ವಿರುದ್ಧ 32 ಪ್ರಕರಣಗಳಿವೆ: ಸಿಎಂ ಸಿದ್ದರಾಮಯ್ಯ

ಪ್ರವೀಣ ಖಾಂಡ್ಯ
ಬೆಂಗಳೂರು , ಬುಧವಾರ, 13 ಜುಲೈ 2016 (15:52 IST)
ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಜರಂಗ ದಳ ಸದಸ್ಯ ಪ್ರವೀಣ ಖಾಂಡ್ಯ ಒಬ್ಬ ಹ್ಯಾಬಿಚುಯಲ್ ಅಫೆಂಡರ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
 
ವಿಧಾನಸಭೆಯಲ್ಲಿ ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ ಕುರಿತು ಮಾತನಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಜರಂಗ ದಳ ಸದಸ್ಯ ಪ್ರವೀಣ ಖಾಂಡ್ಯ ಒಬ್ಬ ಹ್ಯಾಬಿಚುಯಲ್ ಅಫೆಂಡರ್. ಇತನ ವಿರುದ್ಧ ಒಟ್ಟು 32 ಪ್ರಕರಣಗಳಿವೆ ಎಂದು ತಿಳಿಸಿದರು.
 
ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ ಮತ್ತು ಮಂಗಳೂರು ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣಗಳು ಬೇರೆ ಬೇರೆಯಾಗಿದೆ. ರಾಜ್ಯದಲ್ಲಿ ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಅಧಿಕಾರಿಗಳ ಆತ್ಮಹತ್ಯೆ ಒಳ್ಳೆಯದಲ್ಲ. ಇಂತಹ ಪ್ರಕರಣಗಳಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದು ತಿಳಿಸಿದರು.
 
ನ್ಯಾಶನಲ್ ಕ್ರೈಂ ಬ್ಯೂರೊ ಅಂಕಿಅಂಶಗಳ ಪ್ರಕಾರ, 2005 ರ ಸಾಲಿನಲ್ಲಿ 12 ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿದ್ದು, 2006-5, 2007-24, 2008-4, 2009-5, 2010-13 ಮತ್ತು 2013-15 ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭೂ ಸ್ವಾಧೀನ ಸಮಸ್ಯೆ: ಕೇಂದ್ರ ಸಚಿವ ಗೋಯಲ್‌ಗೆ ತಿರುಗೇಟು ನೀಡಿದ ಡಿಕೆಶಿ