Select Your Language

Notifications

webdunia
webdunia
webdunia
webdunia

ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ಯತ್ನ

30 year Man
ಬೆಂಗಳೂರು , ಶುಕ್ರವಾರ, 14 ಅಕ್ಟೋಬರ್ 2016 (14:31 IST)
ಎರಡು ವರ್ಷದ ಪುಟ್ಟ ಮಗುವಿನ ಮೇಲೆ 30 ವರ್ಷದ ಕಾಮುಕನೊಬ್ಬ ಅತ್ಯಾಚಾರಗೈಯ್ಯಲು ಯತ್ನಿಸಿದ ಹೇಯ ಘಟನೆ ನಗರದ ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 
 
ಆರೋಪಿಯನ್ನು ನದೀಮ್ ಎಂದು ಗುರುತಿಸಲಾಗಿದ್ದು ಆತನೀಗ ಪೊಲೀಸರ ವಶದಲ್ಲಿದ್ದಾನೆ. 
 
ತಾಯಿಯೋರ್ವಳು ತನ್ನ ಹಿರಿಯ ಮಗುವನ್ನು ಶಾಲೆಯಿಂದ ಕರೆ ತರಲು ಹೋಗಿದ್ದಾಗ ಎರಡು ವರ್ಷದ ಮಗು ಮನೆ ಹೊರಗೆ ಆಟವಾಡುತ್ತಿತ್ತು. ಸುತ್ತಮುತ್ತ ಯಾರೂ ಇಲ್ಲದ್ದನ್ನು ಕಂಡು ಮಗುವನ್ನು ಎತ್ತಿಕೊಂಡು ಹೋದ ನದೀಮ್ ಅದರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. 
 
ಏನೂ ಅರಿಯದ ಮಗು ಆತನ ದುರ್ವರ್ತನೆಗೆ ಹೆದರಿ ಜೋರಾಗಿ ಕಿರುಚಿಕೊಂಡಾಗ ಸುತ್ತಮುತ್ತಲಿನ ಜನ ಓಡಿ ಬಂದು ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
 
ಮಗುವನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿದ್ದು ಆರೋಪಿಯ ವಿಚಾರಣೆ ಮುಂದುವರೆದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ತೊರೆಯುವುದು ಶತಃ ಸಿದ್ಧ: ವಿ. ಶ್ರೀನಿವಾಸ ಪ್ರಸಾದ್