Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ಹಾಡಹಗಲೇ 3 ವರ್ಷದ ಮಗು ಕಿಡ್ನ್ಯಾಪ್

ಬೆಂಗಳೂರಲ್ಲಿ ಹಾಡಹಗಲೇ 3 ವರ್ಷದ ಮಗು ಕಿಡ್ನ್ಯಾಪ್
ಬೆಂಗಳೂರು , ಭಾನುವಾರ, 30 ಏಪ್ರಿಲ್ 2017 (12:07 IST)
ಬೆಂಗಳೂರಲ್ಲಿ ಹಾಡಹಗಲೇ 3 ವರ್ಷದ ಮಗುವಿನ ಕಿಡ್ನ್ಯಾಪ್ ನಡೆದಿದೆ. ನಿನ್ನೆ ಮಧ್ಯಾಹ್ನ ಸಿದ್ಧಾಪುರದ ಗುಟ್ಟೆಪಾಳ್ಯದ ಮೋರಿ ಬಳಿ ಆಟವಾಡುತ್ತಿದ್ದ 3 ವರ್ಷದ ಹೆಣ್ಣುಮಗುವನ್ನ ಕಿಡ್ನ್ಯಾಪ್ ಮಾಡಲಾಗಿದೆ.

ಮನೆಯಾಚೆ ದೊಡ್ಡಪ್ಪನ ಮಗನ ಜೊತೆ ಆಟವಾಡುತ್ತಿದ್ದ ಕತೀಜಾ ಕುಬ್ರಾ ಎಂಬ ಮಗುವನ್ನ 15 ವರ್ಷದ ಹುಡುಗನೊಬ್ಬ ಕಿಡ್ನ್ಯಾಪ್ ಮಾಡಿದ್ದಾನೆ. ಯುವಕನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗು ವಿರೋಧಿಸಿದರೂ ಬಲವಂತವಾಗಿ ಎಳೆದೊಯ್ದಿದ್ದಾನೆ.

ಸಲ್ಯೂಷನ್ ಹೊಡೆಯುವ ಕೆಲ ಸ್ಥಳೀಯ ಪೊರ್ಕಿಗಳೇ ಈ ಕೃತ್ಯ ಎಸಗಿರುವ ಶಂಕೆ ಇದ್ದು, ಸಿದ್ಧಾಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನನ್ನ ಮಗುವನ್ನ ತಂದು ಕೊಟ್ಟುಬಿಡಿ ಯಾರ ವಿರುದ್ಧವೂ ನಾವು ದೂರು ಕೊಡುವುದಿಲ್ಲ ಎಂದು ಮಗುವಿನ ತಾಯಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಅಲವತ್ತುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಇವಿಎಂ ಎಂದರೆ Every Vote Modi: ಯೋಗಿ ಆದಿತ್ಯಾನಾಥ್