Publish Date: Sun, 29 Dec 2019 (10:04 IST)
Updated Date: Sun, 29 Dec 2019 (10:06 IST)
ಯಾದಗಿರಿ : ಚಾಕೋಲೆಟ್ ಕೊಡಿಸುವ ಆಸೆ ತೋರಿಸಿ 3 ವರ್ಷದ ಬಾಲಕಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ ಘಟನೆ ಯಾದಗಿರಿಯ ಹಳ್ಳಿಯೊಂದರಲ್ಲಿ ನಡೆದಿದೆ.
ಬಾಲಕಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಅಲ್ಲಿಗೆ ಬಂದ ಕಾಮುಕ ಚಾಕೋಲೇಟ್ ಕೊಡಿಸುವುದಾಗಿ ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಕಿರುಚಾಟ ಕೇಳಿ ಆಕೆಯ ಪೋಷಕರು ಕಾಮುಕನ ಮನೆ ಬಳಿ ಬಂದಾಗ ಕೃತ್ಯ ಬಯಲಾಗಿದ್ದು, ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೀವ್ರವಾಗಿ ಅಸ್ವಸ್ಥಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.