Publish Date: Thu, 07 Dec 2023 (17:46 IST)
Updated Date: Thu, 07 Dec 2023 (17:49 IST)
ಅಸ್ಸಾಂನ ಗುವಾಹಟಿಯಲ್ಲಿ ಗುರುವಾರ 3.5 ತೀವ್ರತೆಯ ಭೂಕಂಪ ಸಂಭವಿಸಿದೆ. ಬೆಳಗ್ಗೆ 5:42ರ ಸುಮಾರಿಗೆ ಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭೂಕಂಪದಿಂದ ಯಾವುದೇ ಹಾನಿಯಾಗಿಲ್ಲ. ಆದರೆ ಮುಂಜಾನೆ ಸಂಭವಿಸಿದ ಈ ಕಂಪನದಿಂದ ಜನರು ಭಯಭೀತರಾಗಿದ್ದರು,
ಅನೇಕ ಮಂದಿ ಮನೆಗಳಿಂದ ಹೊರಗೆ ಬಂದಿದ್ದಾರೆ.ಇನ್ನು ಕಳೆದ ತಿಂಗಳಿನಿಂದ ಭೂಕಂಪದ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.