Select Your Language

Notifications

webdunia
webdunia
webdunia
webdunia

ಹುಡುಗಿ ವೆಡ್ಸ್ ಹುಡುಗಿ: 25 ವರ್ಷದ ಯುವತಿಯನ್ನು ವಿವಾಹವಾದ 21ರ ಯುವತಿ

ಹುಡುಗಿ ವೆಡ್ಸ್ ಹುಡುಗಿ: 25 ವರ್ಷದ ಯುವತಿಯನ್ನು ವಿವಾಹವಾದ 21ರ ಯುವತಿ
ಬೆಂಗಳೂರು , ಬುಧವಾರ, 5 ಜುಲೈ 2017 (13:19 IST)
25 ವರ್ಷದ ಯುವತಿ 21 ವರ್ಷದ ಯುವತಿಯನ್ನು ವಿವಾಹವಾದ ವಿಚಿತ್ರ ಘಟನೆ ವರದಿಯಾಗಿದೆ.
 
ಇಬ್ಬರು ಕೂಡಾ ಸಂಬಂಧಿಕರಾಗಿದ್ದು ಪರಸ್ಪರ ಲವ್ ಮಾಡಿ ಮನೆಯಿಂದ ಪರಾರಿಯಾಗಿದ್ದರು. ಯುವತಿಯರಿಗೆ ಪೊಲೀಸರು ಕೌನ್ಸಿಲ್ ನಡೆಸುತ್ತಿದ್ದರೂ ನಾವು ವಿವಾಹವಾಗಿದ್ದೇವೆ. ಯಾವುದೇ ಕಾರಣಕ್ಕೂ ಬೇರೆ ಬೇರೆಯಾಗುವುದಿಲ್ಲ. ಪೋಷಕರೊಂದಿಗೆ ತೆರಳುವುದಿಲ್ಲ ಎಂದು ಯುವತಿಯರು ನಿರಾಕರಣೆ ಮಾಡಿದ್ದಾರೆ.
 
21 ವರ್ಷ ಯುವತಿಯ ಪೋಷಕರು ವಿಜಯನಗರ ಪೊಲೀಸ್ ಠಾಣೆಯಲ್ಲಿ 25 ವರ್ಷದ ಯುವತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಇಬ್ಬರು ಯುವತಿಯರನ್ನು ಕರೆಸಿ ಮನವೊಲಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ ಎನ್ನಲಾಗಿದೆ. 
 
ಒಬ್ಬಳು ಯುವತಿ ಕಾಲ್‌ಸೆಂಟರ್‌ನಲ್ಲಿ ಉದ್ಯೋಗಿಯಾಗಿದ್ದರೆ, ಮತ್ತೊಬ್ಬಳು ಬೇರೆ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾಳೆ. ಇಬ್ಬರು ಪಿಜಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
ದೂರಿನನ್ವಯ ಪೊಲೀಸರು ಯುವತಿಯನ್ನು ಕರೆಸಿ ವಿಚಾರಣೆ ನಡೆಸಿದಾಗ ನಾವಿಬ್ಬರು ಪರಸ್ಪರ ಪ್ರೀತಿಸುತ್ತಿದ್ದೇವೆ.ನಾವು ಈಗಾಗಲೇ ವಿವಾಹವಾಗಿದ್ದೇವೆ ಎಂದು ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ದಾಳಿಯಲ್ಲಿ ತಂದೆ-ತಾಯಿಯನ್ನ ಕಳೆದುಕೊಂಡ ಇಸ್ರೇಲ್ ಬಾಲಕನನನ್ನ ಭೇಟಿ ಮಾಡಲಿರುವ ಮೋದಿ