Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 24 ಪಾಕ್‌, 159 ಬಾಂಗ್ಲಾ ಪ್ರಜೆಗಳು ವಶಕ್ಕೆ: ಪರಮೇಶ್ವರ್‌

Home Minister G. Parameshwar

Sampriya

ಬೆಳಗಾವಿ , ಗುರುವಾರ, 19 ಡಿಸೆಂಬರ್ 2024 (14:42 IST)
ಬೆಳಗಾವಿ: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 24 ಜನ ಪಾಕಿಸ್ತಾನ ಮತ್ತು 159 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ತಿಳಿಸಿದರು.

ಕರ್ನಾಟಕ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾ ಪ್ರಜೆಗಳ ಅಂಕಿ ಅಂಶವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಅಲ್ಲದೇ 115 ಜನ ಬಾಂಗ್ಲಾದೇಶಿಗರು ನಕಲಿ ದಾಖಲೆಗಳ ಮೂಲಕ ವಾಸವಿರುವುದು ಕಂಡುಬಂದಿದೆ.

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿ ಪ್ರಜೆಗಳ ಪತ್ತೆಗಾಗಿ ಬೆಂಗಳೂರಿನಲ್ಲಿ ವಿಶೇಷ ಘಟಕ ಸ್ಥಾಪನೆ ಮಾಡಲಾಗಿದೆ. ಅಕ್ರಮವಾಗಿ ಬರೋದು ಇದೇನೂ ಹೊಸದಲ್ಲ. ಲಕ್ಷಾಂತರ ಜನ ಭಾರತಕ್ಕೆ ಬರ್ತಿದ್ದಾರೆ ಎಂದರು.

ಅಕ್ರಮ ವಲಸಿಗರನ್ನು ತಡೆಗಟ್ಟುವ ಕೆಲಸ ಸೈನಿಕರು ಗಡಿಯಲ್ಲಿ ಮಾಡುತ್ತಿದ್ದಾರೆ. ಆದರೂ ನುಸುಳಿಕೊಂಡು ಹೇಗೆ ಭಾರತಕ್ಕೆ ಬರುತ್ತಾರೆ ಅನ್ನೋದು ಪ್ರಶ್ನೆಯಾಗಿದೆ. ಇದನ್ನ ತಡೆಗಟ್ಟುವ ಕೆಲಸ ಪ್ರತಿ ವರ್ಷ ನಾವು ಇದರ ಪರಿಶೀಲನೆ ಮಾಡುತ್ತೇವೆ. ಅಕ್ರಮವಾಗಿ ಇರುವರನ್ನು ಗಡಿಪಾರು ಮಾಡೋ ಕೆಲಸ ಮಾಡ್ತಿದ್ದೇವೆ ಎಂದು ತಿಳಿಸಿದರು.

ಆಫ್ರಿಕಾದಿಂದ ಬಂದು ಡ್ರಗ್ಸ್ ಮಾರಾಟ ಮಾಡೋ ಕೆಲಸ ಆಗ್ತಿದೆ. ಸ್ಟೂಡೆಂಟ್‌ ವೀಸಾದಲ್ಲಿ ಬಂದು ಡ್ರಗ್ ದಂಧೆ ಮಾಡ್ತಾರೆ. ಈ ರೀತಿ ಅಕ್ರಮವಾಗಿ ಬಂದು ನೆಲೆಸಿರುವವರ ಪತ್ತೆಗೆ ಪ್ರತಿ ಜಿಲ್ಲೆಯಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ಪರಮೇಶ್ವರ್‌ ಮಾಹಿತಿ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸಂಸದ ಪ್ರತಾಪ್ ಗೆ ಗಾಯ: ಎಲ್ಲಾ ನಾಟಕ ಎಂದ ಕೆಸಿ ವೇಣುಗೋಪಾಲ್