Webdunia - Bharat's app for daily news and videos

Install App

ಒಂದು ತಿಂಗಳಿಗೆ 23 ಸಾವಿರ ರೂ. ಕರೆಂಟ್​​ ಶಾಕ್​​..!

Webdunia
ಸೋಮವಾರ, 31 ಅಕ್ಟೋಬರ್ 2022 (17:00 IST)
ಬೆಲೆಗಳು ದಿನದಿಂದ ದಿನಕ್ಕೆ ಏರಿಕೆ ಆಗ್ತಿದೆ. ಆದರೆ ಬೆಂಗಳೂರಿನ ಮನೆ ಮಾಲೀಕನೋರ್ವನಿಗೆ ವಿದ್ಯುತ್ ಶಾಕ್ ಎದುರಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ದೊಡ್ಡ ಕಮ್ಮನಹಳ್ಳಿಯಲ್ಲಿರುವ ಮನೆ ಮಾಲೀಕನಿಗೆ ಬೆಸ್ಕಾಂ ಶಾಕ್ ನೀಡಿದೆ. ತಿಂಗಳಿಗೆ 300-400 ರೂಪಾಯಿ ಬರ್ತಿದ್ದ ಕರೆಂಟ್ ಬಿಲ್, ಸೆಪ್ಟೆಂಬರ್‌ನಲ್ಲಿ ಬರೋಬ್ಬರಿ 22 ಸಾವಿರ ರೂಪಾಯಿ ಬಂದಿದೆ. ವಿದ್ಯುತ್ ಬಿಲ್ ಕಂಡ ಮನೆ ಮಾಲೀಕ ರಾಜುವಿಗೆ ವಿದ್ಯುತ್ ಶಾಕ್ ಹೊಡೆದಂತಾಗಿದೆ. ಆಗಸ್ಟ್ ತಿಂಗಳಿನಲ್ಲಿ 348 ರೂಪಾಯಿ ಕರೆಂಟ್ ಬಿಲ್ ಬಂದಿತ್ತು. ಇದನ್ನು ಆತ ಕೇಳಿದ್ದ. ಆದರೆ, 22 ಸಾವಿರ ರೂಪಾಯಿ ಸೆಪ್ಟೆಂಬರ್ ಕರೆಂಟ್ ಬಿಲ್ ಅನ್ನು ಬೆಸ್ಕಾಂ ಸಿಬ್ಬಂದಿ ನೀಡಿದ್ದಾನೆ. ಇದನ್ನ ಕಂಡ ಮನೆ ಮಾಲೀಕ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ನಂತರ ಈ ಬಿಲ್ ಅನ್ನು ಪಾವತಿ ಮಾಡಿಲ್ಲ. ನಂತರ ಈ ತಿಂಗಳ 22 ಸಾವಿರದ ಜೊತೆಗೆ ಒಂದು ತಿಂಗಳ ಕರೆಂಟ್ ಬಿಲ್ ಸೇರಿಸಿ 23 ಸಾವಿರ ರೂಪಾಯಿ ಬಿಲ್ ನೀಡಲಾಗುತ್ತದೆ. ಇದನ್ನ ಕಂಡ ರಾಜುಗೆ ತಲೆ ಕೆಟ್ಟಂತಾಗಿದ್ದರೆ, ಪೇಚಿಗೆ ಸಿಲುಕಿದ್ದಾನೆ. ಬೇರೆಯವರ ಮನೆ ಬಿಲ್ ಅನ್ನು ಈ ವ್ಯಕ್ತಿಗೆ ನೀಡಲಾಗಿದೆ ಎಂದು ಮನೆ ಮಾಲೀಕ ಆರೋಪ ಮಾಡಿದ್ದಾನೆ. ನಾವು ಬಡವರು ನಾವು ಅಷ್ಟೊಂದು ಹಣವನ್ನು ನೀಡಲು ಸಾಧ್ಯ ಎಂದು ಅವರು ತಮ್ಮ ಅಳಲನ್ನು ತೋಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments