Publish Date: Thu, 16 Apr 2020 (14:21 IST)
Updated Date: Thu, 16 Apr 2020 (14:23 IST)
ಒಂದೇ ದಿನದಲ್ಲಿ ಈ ಜಿಲ್ಲೆಯಲ್ಲಿ 17 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಜನರಲ್ಲಿ ಭೀತಿ ಮನೆಮಾಡುವಂತೆ ಮಾಡಿದೆ.
ಬೆಳಗಾವಿಯಲ್ಲಿ ಇದೀಗ ಕೊರೊನಾ ಪೀಡಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಒಮ್ಮೇಲೆ ಹೆಚ್ಚಾಗಿದ್ದು, ಬಿಡುಗಡೆಯಾದ ಹೆಲ್ತ್ ಬುಲೆಟೀನ್ ವರದಿ ಪ್ರಕಾರ ಜಿಲ್ಲೆಯ 17 ಜನರಿಗೆ ಸೋಂಕು ಇರುವುದು ದೃಢವಾಗಿದ್ದು, ಇಲ್ಲಿವರೆಗೆ ಸೋಂಕಿತರ ಸಂಖ್ಯೆ 36 ಕ್ಕೇರಿದೆ.
ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ 8 ಹಾಗೂ ರಾಯಬಾಗ- ಕುಡಚಿ 7, ಚಿಕ್ಕೋಡಿಯಲ್ಲಿ 1, ಬೆಳಗಾವಿ ನಗರ 1 ಹೀಗೆ 17 ಸೋಂಕಿತರು ಪತ್ತೆಯಾಗಿದ್ದಾರೆ.