Select Your Language

Notifications

webdunia
webdunia
webdunia
webdunia

ಜ.31 ವರೆಗೂ 144 ಸೆಕ್ಷನ್ ಜಾರಿ

ಜ.31 ವರೆಗೂ 144 ಸೆಕ್ಷನ್ ಜಾರಿ
ಬೆಂಗಳೂರು , ಸೋಮವಾರ, 17 ಜನವರಿ 2022 (14:45 IST)
ಕೊರೊನಾ ಸೋಂಕಿಗೆ ಕಡಿವಾಣ ಹಾಕುವಲ್ಲಿ ಈ ಹಿಂದೆ ನಗರದಲ್ಲಿ ಜನಸಂಚಾರ ದಟ್ಟಣೆ ತಡೆಗೆ ಜಾರಿ ಮಾಡಲಾಗಿರುವ 144 ಸೆಕ್ಷನ್​ನ ಜನವರಿ 31ರವರೆಗೂ ವಿಸ್ತರಿಸಲಾಗಿದೆ.
ಜನವರಿ 31ರವರೆಗೂ 144 ಸೆಕ್ಷನ್ ವಿಸ್ತರಿಸಿ ನಗರ ಪೊಲೀಸ್ ಆಯುಕ್ತರಾದ ಕಮಲ್​ ಪಂತ್​ ಆದೇಶ ಹೊರಡಿಸಿದ್ದಾರೆ.
 
ಜೊತೆಗೆ ನಿಯಮ ಉಲ್ಲಂಘಿಸಿದರೇ ಕಾನೂನು ಕ್ರಮದ ಎಚ್ಚರಿಕೆಯೂ ನೀಡಿದ್ದಾರೆ.
 
ಇದಲ್ಲದೆ ರಾತ್ರಿ ನಿಷೇಧಾಜ್ಞೆ ಹಾಗೂ ವಾರಾಂತ್ಯದ ಕರ್ಫ್ಯೂ ಕೂಡ ವಿಸ್ತರಿಸಲಾಗಿದೆ.
 
ಜನಸಂದಣಿಗೆ ಕಡಿವಾಣ ಹಾಕಲು ಆಯುಕ್ತರು, ಜನವರಿ 6ರಿಂದ 19ರವರೆಗೂ 144 ಸೆಕ್ಷನ್ ಜಾರಿಗೊಳಿಸಿದ್ದರು.
 
ಇನ್ನು ಸಿಲಿಕಾನ್ ಸಿಟಿಯಲ್ಲಿ ಕಳೆದ ಎರಡು ದಿನಗಳಿಗೆ ಹೋಲಿಕೆ ಮಾಡಿದ್ರೆ ಇವತ್ತು ಕಡಿಮೆ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಂದು 18,622 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.
 
ಇಂದು ಬೊಮ್ಮನಹಳ್ಳಿ ವಲಯದಲ್ಲಿ 1,759, ದಾಸರಹಳ್ಳಿ 467, ಬೆಂಗಳೂರು ಪೂರ್ವ 3,046 , ಮಹದೇವಪುರ 2,733, ಆರ್ ಆರ್‌ನಗರ 1,269,
 
ದಕ್ಷಿಣ ವಲಯ 2,538, ಪಶ್ಚಿಮ 1,891, ಯಲಹಂಕ 1,669, ಅನೇಕಲ್ 819, ಬೆಂಗಳೂರು ಹೊರವಲಯ 1,446 ಸೇರಿ ಒಟ್ಟು 18,622 ಪಾಸಿಟಿವ್ ದೃಢಪಟ್ಟಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ಲೀಲ ವರ್ತನೆ ಪ್ರಶ್ನಿಸಿದ್ದಕ್ಕೆ ಕೊಲ್ಲಲು ಮುಂದಾದ ವ್ಯಕ್ತಿ