Select Your Language

Notifications

webdunia
webdunia
webdunia
webdunia

ಎಳನೀರು ಸೇವಿಸಿ137 ಮಂದಿ ಅಸ್ವಸ್ಥ: ಫೇಮಸ್ ಅಡ್ಯಾರು ಬೊಂಡಾ ಫ್ಯಾಕ್ಟರಿ ಮುಚ್ಚಲು ಆದೇಶ

Adyar Bonda Factory

Sampriya

ಮಂಗಳೂರು , ಶುಕ್ರವಾರ, 12 ಏಪ್ರಿಲ್ 2024 (19:09 IST)
Photo Courtesy X
ಮಂಗಳೂರು: ನಗರದ ಹೆಸರು ವಾಸಿಯಾಗಿರುವ ಅಡ್ಯಾರು, ನ್ಯಾಚುರಲ್‌ ರಸ್ಥೆಯ ಬೊಂಡ ಫ್ಯಾಕ್ಟರಿಯ ಎಳನೀರನ್ನು ಸೇವಿಸಿ 137 ಮಂದಿ ಅಸ್ವಸ್ಥರಾದ ಬೆನ್ನಲ್ಲೇ ಫ್ಯಾಕ್ಟರಿಯನ್ನು ಮುಚ್ಚಲು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಮ್ಮಯ್ಯ ಆದೇಶಿಸಿದ್ದಾರೆ.

ಮಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಏರಿಕೆಯಾಗುತ್ತಿದ್ದು, ಜನರು ದೇಹವನ್ನು ತಂಪಾಗಿಸಲು ಎಳನೀರು, ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ. ಹಾಗೆಯೇ ಏ.8ರಂದು ಬೊಂಡ ಪ್ಯಾಕ್ಟರಿಯ ಎಳನೀರು ಸೇವಿಸಿದ ಕಣ್ಣೂರು ಮತ್ತು ತುಂಬೆ ನಿವಾಸಿಗಳು ಮರುದಿನ ಬೆಳಿಗ್ಗೆ ವಾಂತಿ-ಭೇದಿಯಾಗಿ ತೀವ್ರವಾಗಿ ಅಸ್ವಸ್ಥರಾಗಿದ್ದರು.

137 ಮಂದಿ ಪೈಕಿ 84 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದರೆ 53 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿಯವರೆಗೆ ಸುಮಾರು 23 ರೋಗಿಗಳನ್ನು ಡಿಸ್ಚಾರ್ಜ್ ಮಾಡಲಾಗಿದೆ. ಎಲ್ಲಾ ರೋಗಿಗಳು ಸ್ಥಿರವಾಗಿದ್ದು, ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ತನಿಖೆಯ ದೃಷ್ಟಿಯಿಂದ ಫ್ಯಾಕ್ಟರಿಯನ್ನು ಮುಚ್ಚಲಾಗಿದ್ದು ಆರೋಗ್ಯ ಅಧಿಕಾರಿಗಳು ಸಂತ್ರಸ್ತ ರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಮೇಲೆ ದೇವೇಗೌಡರ ಕುಟುಂಬಕ್ಕೆ ಹಿಂದಿನಿಂದಲೂ ಹಗೆತನವಿದೆ: ಡಿ ಕೆ ಸುರೇಶ್